ಪರ್ಣದ ಮರೆಯ ಫಲದಂತೆ,
ಬಣ್ಣದ ಮರೆಯ ಬಂಗಾರದಂತೆ,
ತಂತು ಚರ್ಮಂಗಳಲ್ಲಿ ತೋರುವವನ ಗತಿಯಂತೆ.
ಕಾಯದಲ್ಲಿ ಸುಳುಹುದೋರುತ್ತ.
ಭಾವದಲ್ಲಿ ಪರವನಾಚರಿಸುತ್ತ
ಕಾಯದ ಮರೆಯಲ್ಲಿ ತಿರುಗಾಡುವ
ಭಾವಶುದ್ಧಾತ್ಮ ಉಭಯಕ್ಕೆ
ಕಾಲಾಂತಕ ಬ್ಥೀಮೇಶ್ವರಲಿಂಗವು
ಅವರ ಬಾಗಿಲಲ್ಲಿ ಬಳಸಾಡುತಿಪ್ಪನು.
Art
Manuscript
Music
Courtesy:
Transliteration
Parṇada mareya phaladante,
baṇṇada mareya baṅgāradante,
tantu carmaṅgaḷalli tōruvavana gatiyante.
Kāyadalli suḷuhudōrutta.
Bhāvadalli paravanācarisutta
kāyada mareyalli tirugāḍuva
bhāvaśud'dhātma ubhayakke
kālāntaka bthīmēśvaraliṅgavu
avara bāgilalli baḷasāḍutippanu.