ಪಾಪ ಪುಣ್ಯವಿಲ್ಲಾ ಎಂದು ನೀಕರಿಸಿ ನಡೆಯಬಹುದೆ
ದಿವರಾತ್ರೆ ಉಳ್ಳನ್ನಕ್ಕ?
ಉತ್ತಮ ಕನಿಷ್ಠ ಮಧ್ಯಮವೆಂಬುದನರಿವನ್ನಕ್ಕ
ಕಾಲ ವೇಳೆಯನರಿದು ಶಿವಲಿಂಗಾರ್ಚನೆಯ ಮಾಡಬೇಕು.
ವಾರ ನೇಮ ಸ್ಥಿತಿ ಲಗ್ನಂಗಳಲ್ಲಿ ಹರಶರಣರಿಂದ
ಪರಿಹರಿಸಿಕೊಳ್ಳಬೇಕು. ಅದೆಂತೆಂದಡೆ:
ತನ್ನ ಒಡಲೆಂಬನ್ನಕ್ಕ, ತನ್ನ ಗುರುವೆಂಬನ್ನಕ್ಕ,
ತನ್ನ ಜಂಗಮವೆಂಬನ್ನಕ್ಕ,
ಶೀತ ಉಷ್ಣ ಮೃದು ಕಠಿಣಂಗಳನರಿವನ್ನಕ್ಕ,
ಕಾಲಾಂತಕ ಭೀಮೇಶ್ವರಲಿಂಗವೆಂದು ಪೂಜಿಸಬೇಕು.