Index   ವಚನ - 74    Search  
 
ರಸೇಂದ್ರಿಯ ಗಂಧೇಂದ್ರಿಯ ರೂಪೇಂದ್ರಿಯ ಶಬ್ದೇಂದ್ರಿಯ ಸ್ಪರ್ಶನೇಂದ್ರಿಯ ಪಂಚೇಂದ್ರಿಯಂಗಳಲ್ಲಿ ಸಲೆ ಸಂದು ಒಂದರ ಗುಣವ ಒಂದರಿಯದಂತೆ ಮತ್ತೆ ಏಕೇಂದ್ರಿಯವೆಂದು ಸಂಧಿಸಿ ಅರ್ಪಿಸುವ ಪರಿಯಿನ್ನೆಂತೊ? ಆ ಗುಣದ ಸಂಗವನರಿದಲ್ಲಿ ಇಂದ್ರಿಯಂಗಳ ಮುಖದಲ್ಲಿ ಲಿಂಗವನರಿದುದು. ಹುಟ್ಟಿನ ದೆಸೆಯಿಂದ ಹಸ್ತಕ್ಕೆ ಬಂದು ಮತ್ತೆ ಜಿಹ್ವೆ ಅರಿದಂತೆ ಅರ್ಪಿತದ ಭೇದ. ಇಷ್ಟ ಪ್ರಾಣಸಂಗ ಕಾಲಾಂತಕ ಭೀಮೇಶ್ವರಲಿಂಗವನರಿವುದಕ್ಕೆ ಅರ್ಪಿತ ಅವಧಾನಿಯ ಇರವು.