Index   ವಚನ - 73    Search  
 
ರತ್ನ ಪಾಷಾಣದ ಕುಲದಲ್ಲಿದ್ದು ಸ್ವಜಾತಿಗೆ ಸಿಕ್ಕದಂತೆ, ಗಂಧ ಕುಸುಮದಲ್ಲಿದ್ದು ಅದರೊಳಗೆ ಬಂಧಿತವಾಗದಂತೆ, ವಾಯು ಸಕಲ ಚೇತನದೊಳಗಿದ್ದು ರೂಪಿಂಗೊಡಲಿಲ್ಲದೆ ಅಲೆಯಲಿಕ್ಕೆ ಉಂಟಾಗಿ, ಆ ತೆರದಂತೆ, ಹಿಡಿವಲ್ಲಿ ಬಿಡುವಲ್ಲಿ ಒಡಗೂಡುವ ಸುಖವನರಿತಡೆ; ಕಾಲಾಂತಕ ಭೀಮೇಶ್ವರಲಿಂಗವು ತಾನೆ.