ವಚನ - 1001     
 
ಒಂದ ಮಾಡ ಹೋದಡೆ ಮತ್ತೊಂದಾಯಿತ್ತೆಂಬ ಮಾತು ದಿಟವಾಯಿತ್ತು ನೋಡಾ. ನಿಮ್ಮ ಒಡತಣ ಅನುಭಾವದಿಂದ ಗುರುಮುಖ ಸಾಧ್ಯವಾದುದಯ್ಯಾ, ಗುಹೇಶ್ವರಲಿಂಗದಲ್ಲಿ ನಿನಗೂ ನನಗೂ ಉಪದೇಶವ ಒಂದಾದ ಭೇದವ ಹೇಳಾ, ಚೆನ್ನಬಸವಣ್ಣಾ.