ಒಂದ ಮಾಡಹೋದಡೆ
ಮತ್ತೊಂದಾಯಿತ್ತೆಂಬುದು,
ಎನಗಾಯಿತ್ತು ನೋಡಾ ಬಸವಣ್ಣಾ.
ಮಡಿವಾಳನ ಪೂರ್ವಾಪರವನೊರೆದು ನೋಡಿದಡೆ
ನಿನ್ನ ಪೂರ್ವಾಪರ ಎನಗೆ
ಅರಿಯ ಬಂದಿತ್ತು ನೋಡಾ ಬಸವಣ್ಣಾ.
ನಿನ್ನ ಪೂರ್ವಾಪರಸಂಗವ ಮಾಡಬಂದಡೆ
ಎನ್ನ ಪೂರ್ವಾಪರ ಎನಗೆ
ಅರಿಯ ಬಂದಿತ್ತು ನೋಡಾ ಬಸವಣ್ಣಾ.
ಮಹಾಜ್ಞಾನಿಗಳ ಸಂಗದಿಂದ
ಉಭಯ ಸಂಗಸಿದ್ಧಿಯೆಂಬುದು
ದಿಟವಾಯಿತ್ತು ನೋಡಾ ಬಸವಣ್ಣಾ.
ಗುಹೇಶ್ವರನ ಶರಣ ಮಡಿವಾಳ ಮಾಚಿತಂದೆಗಳ ಶ್ರೀಪಾದಕ್ಕೆ
ನಮೋ ನಮೋ ಎಂದು ಬದುಕಿದೆನು
ಕಾಣಾ ಸಂಗನಬಸವಣ್ಣಾ.
Transliteration Onda māḍahōdaḍe
mattondāyittembudu,
enagāyittu nōḍā basavaṇṇā.
Maḍivāḷana pūrvāparavanoredu nōḍidaḍe
ninna pūrvāpara enage
ariya bandittu nōḍā basavaṇṇā.
Ninna pūrvāparasaṅgava māḍabandaḍe
enna pūrvāpara enage
ariya bandittu nōḍā basavaṇṇā.
Mahājñānigaḷa saṅgadinda
ubhaya saṅgasid'dhiyembudu
diṭavāyittu nōḍā basavaṇṇā.
Guhēśvarana śaraṇa maḍivāḷa mācitandegaḷa śrīpādakke
namō namō endu badukidenu
kāṇā saṅganabasavaṇṇā.
Hindi Translation एक करने गये तो और एक हुआ था कहना ,
मुझे हुआ था देख बसवण्णा ।
मडिवाळ का पूर्वापर जाँच देखे तो
तेरा पूर्वापर मुझे समझ आयी थी देख बसवण्णा ।
तेरा पूर्वापर संग करने आये तो
मेरापूर्वापर मुझे समझ आयी थी देख बसवण्णा ।
महाज्ञानी के संग से उभय संग सिद्धि कहना
सच हुआ था देख बसवण्णा ।
गुहेश्वर का शरण मडिवाळ माचिदेव के श्री पाद को
नमो नमो कह जिंदा हूँ देख संगनबसवण्णा ।
Translated by: Eswara Sharma M and Govindarao B N