Index   ವಚನ - 117    Search  
 
ಅಂಥ ಬ್ರಹ್ಮಾಂಡವ ಹದಿನಾರುಲಕ್ಷದ ಮೇಲೆ ಸಾವಿರದ ಐವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಆಷಾಡಿಯೆಂಬ ಭುವನ. ಆ ಭುವನದೊಳು ಲಲಾಟಾಕ್ಷನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಐನೂರೆಪ್ಪತ್ತೈದುಕೋಟಿ ವಿಷ್ಣು-ಬ್ರಹ್ಮ-ಇಂದ್ರ-ಚಂದ್ರಾದಿತ್ಯರಿಹರು ಐನೂರೆಪ್ಪತ್ತೈದುಕೋಟಿ ರುದ್ರರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.