ಅಂಥ ಬ್ರಹ್ಮಾಂಡವ ಹದಿನೇಳು ಲಕ್ಷದ ಮೇಲೆ ಸಾವಿರದ ಅರವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ತಸ್ಕರವೆಂಬ ಭುವನ.
ಆ ಭುವನದೊಳು ಗೋಕರ್ಣನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಐನೂರೆಂಬತ್ತುಕೋಟಿ ವೇದಪುರುಷರು, ಮನೀಂದ್ರರು,
ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ.
ಐನೂರೆಂಬತ್ತುಕೋಟಿ ನಾರಾಯಣ-ಬ್ರಹ್ಮರು-
ರುದ್ರಾದಿಗಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Antha brahmāṇḍava hadinēḷu lakṣada mēle sāvirada aravatteṇṭu
brahmāṇḍavanoḷakoṇḍudondu taskaravemba bhuvana.
Ā bhuvanadoḷu gōkarṇanemba rudramūrti ihanu.
Ā rudramūrtiya ōlagadalli
ainūrembattukōṭi vēdapuruṣaru, manīndraru,
indracandrādityaru dēvarkaḷiharu nōḍā.
Ainūrembattukōṭi nārāyaṇa-brahmaru-
rudrādigaḷiharu nōḍā
apramāṇakūḍalasaṅgamadēvā