Index   ವಚನ - 124    Search  
 
ಅಂಥ ಬ್ರಹ್ಮಾಂಡವ ಇಪ್ಪತ್ಮೂರುಲಕ್ಷದ ಮೇಲೆ ಸಾವಿರದಿನ್ನೂರಾ ಇಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ತ್ರಿಲೋಚನವೆಂಬ ಭುವನ. ಆ ಭುವನದೊಳು ತ್ರಿಕಾಲಾಗ್ನಿಯೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಆರುನೂರಾ ಹತ್ತುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು ನೋಡಾ. ಆರುನೂರಾ ಹತ್ತುಕೋಟಿ ವೇದಪುರುಷರು ಮುನೀಂದ್ರರು ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.