ಅಂಥ ಬ್ರಹ್ಮಾಂಡವ ಇಪ್ಪತ್ನಾಲ್ಕುಲಕ್ಷದ ಮೇಲೆ
ಸಾವಿರದ ಇನ್ನೂರಾ ಮೂವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ವಿಪ್ಸುವೆಂಬ ಭುವನ.
ಆ ಭುವನದೊಳು ವಿಮಲೇಶ್ವರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಆರುನೂರಾ ಹದಿನೈದುಕೋಟಿನಾರಾಯಣ-ಬ್ರಹ್ಮ-ರುದ್ರಾದಿಗಳಿಹರು,
ಆರುನೂರಾ ಹದಿನೈದುಕೋಟಿ ಇಂದ್ರ-ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Antha brahmāṇḍava ippatnālkulakṣada mēle
sāvirada innūrā mūvatteṇṭu
brahmāṇḍavanoḷakoṇḍudondu vipsuvemba bhuvana.
Ā bhuvanadoḷu vimalēśvaranemba rudramūrti ihanu.
Ā rudramūrtiya ōlagadalli
ārunūrā hadinaidukōṭinārāyaṇa-brahma-rudrādigaḷiharu,
ārunūrā hadinaidukōṭi indra-candrādityaru
vēdapuruṣaru munīndraru dēvarkaḷiharu nōḍā
apramāṇakūḍalasaṅgamadēvā.