ಒಂದಾದುದು ಎರಡಪ್ಪುದೆ?
ಎರಡಾದುದು ಒಂದಪ್ಪುದೆ
ಪರಿಣಾಮದ ವೇಳೆಯಲ್ಲಿ ಸಂದೇಹ ಹುಟ್ಟಲುಂಟೆ?
ಬಂದ ಜಂಗಮದ ನಿಲವನರಿಯದೆ,
ಹಿಂದನೆಣಿಸಿ ಹಲವ ಹಂಬಲಿಸುವರೆ?
ಈ ಒಂದು ನಿಲವಿಂಗೆ ಪರಿಣಾಮವ ಮಾಡಬಲ್ಲಡೆ
ನಿನ್ನ ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ
ಪರಿಣಾಮವಹುದು ನೋಡಾ.
ಗುಹೇಶ್ವರನೆಂಬ ಲಿಂಗದ ನಿಲವನರಿಯದೆ
ಮರುಳಾದೆಯಲ್ಲಾ, ಸಂಗನಬಸವಣ್ಣಾ.
Transliteration Ondādudu eraḍappude?
Eraḍādudu ondappude
pariṇāmada vēḷeyalli sandēha huṭṭaluṇṭe?
Banda jaṅgamada nilavanariyade,
hindaneṇisi halava hambalisuvare?
Ī ondu nilaviṅge pariṇāmava māḍaballaḍe
ninna lakṣada mēle tombattārusāvira jaṅgamakke
pariṇāmavahudu nōḍā.
Guhēśvaranemba liṅgada nilavanariyade
maruḷādeyallā, saṅganabasavaṇṇā.
Hindi Translation एक हुआ दो बनेगा ? दो हुआ एक बनेगा (कहना)
परिणाम के संदर्भ में संदेह पैदा हो सकता ?
आये जंगम की स्थिति न जाने,
पूर्व का सोचकर लगातार याद कर सकते ?
इस एक स्थिति का परिणाम कर सके तो
तेरे एक लाख छियानबे हजार जंगम को
परिणाम होगा देख।
गुहेश्वर जैसे लिंग की स्थिति न जाने
पागल हुए न संगबसवण्णा।
Translated by: Eswara Sharma M and Govindarao B N