Index   ವಚನ - 162    Search  
 
ಅಂಥ ಬ್ರಹ್ಮಾಂಡವ ಅರುವತ್ತೊಂದು ಲಕ್ಷದ ಮೇಲೆ ಸಾವಿರಾದಾ ಆರನೂರಾ ಎಂಟು ಬ್ರಹ್ಮಾಂಡವನೊಳಕೊಂಡುದೊಂದು ಕಪರ್ದಿಯೆಂಬ ಭುವನ. ಆ ಭುವನದೊಳು ಕಾಲನಾಶನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಎಂಟುನೂರುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು. ಎಂಟುನೂರುಕೋಟಿ ವೇದಪುರುಷರು ಮುನೀಂದ್ರರು ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.