Index   ವಚನ - 167    Search  
 
ಅಂಥ ಬ್ರಹ್ಮಾಂಡವ ಅರುವತ್ತಾರುಲಕ್ಷದ ಮೇಲೆ ಸಾವಿರದಾ ಆರುನೂರಾ ಐವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಸುಸೂಕ್ಷ್ಮವೆಂಬ ಭುವನ. ಆ ಭುವನದೊಳು ಅಷ್ಟತನುಸಂಹಾರನೆಂಬ ಮಹಾರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಎಂಟುನೂರಿಪ್ಪತ್ತೈದುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು. ಎಂಟುನೂರಿಪ್ಪತ್ತೈದುಕೋಟಿ ವೇದಪುರುಷರು ಇಂದ್ರಚಂದ್ರಾದಿತ್ಯರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.