Index   ವಚನ - 181    Search  
 
ಅಂಥ ಬ್ರಹ್ಮಾಂಡವ ಎಂಬತ್ತುಲಕ್ಷದ ಮೇಲೆ ಸಾವಿರದೇಳುನೂರಾತೊಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ವಾರುಣೇಶವೆಂಬ ಭುವನ. ಆ ಭುವನದೊಳು ಮಹಾನಂದನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಎಂಟುನೂರಾತೊಂಬತ್ತೈದುಕೋಟಿ ರುದ್ರ ಬ್ರಹ್ಮ ಇಂದ್ರ ನಾರಾಯಣರಿಹರು. ಎಂಟುನೂರಾತೊಂಬತ್ತೈದುಕೋಟಿ ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.