Index   ವಚನ - 218    Search  
 
ಅಂಥ ಬ್ರಹ್ಮಾಂಡವ ತೊಂಬತ್ತುಕೋಟಿಯ ಮೇಲೆ ಮೂರುಸಾವಿರದಾ ಅರುವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ರುದ್ರವೆಂಬ ಭುವನ. ಆ ಭುವನದೊಳು ಅನಂತಲೋಚನನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಸಾವಿರಕೋಟಿಯ ಮೇಲೆ ಎಪ್ಪತ್ನಾಲ್ಕುನೂರಾ ಅರುವತ್ತುಕೋಟಿ ರುದ್ರ ಬ್ರಹ್ಮ ನಾರಾಯಣ ಇಂದ್ರರಿಹರು. ಸಾವಿರಕೋಟಿಯ ಮೇಲೆ ಇಪ್ಪತ್ತುನಾಲ್ಕುನೂರಾ ಅರುವತ್ತುಕೋಟಿ ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.