Index   ವಚನ - 237    Search  
 
ಇನ್ನು ಲಿಂಗಗರ್ಭದಲ್ಲಿ ಅನೇಕ ಕೋಟಿ ತತ್ವಂಗಳು, ಅನೇಕ ಕೋಟಿ ಸದಾಶಿವರು, ಅನೇಕ ಕೋಟಿ ಈಶ್ವರರು ಅಡಗಿಹರು ನೋಡಾ. ಆ ಲಿಂಗಗರ್ಭದಲ್ಲಿ ಅನೇಕ ಕೋಟಿ ಮಹೇಶ್ವರರು, ಅನೇಕ ಕೋಟಿ ರುದ್ರರು, ಅನೇಕ ಕೋಟಿ ವಿಷ್ಣ್ವಾದಿಗಳಡಗಿಹರು ನೋಡಾ. ಆ ಲಿಂಗಗರ್ಭದಲ್ಲಿ ಅನೇಕ ಕೋಟಿ ಬ್ರಹ್ಮರು, ಅನೇಕ ಕೋಟಿ ಚಂದ್ರಾದಿತ್ಯರು, ಅನೇಕ ಕೋಟಿ ಋಷಿಗಳಡಗಿಹರು ನೋಡಾ. ಆ ಲಿಂಗಗರ್ಭದಲ್ಲಿ ಅನೇಕ ಕೋಟಿ ಇಂದ್ರರು, ಅನೇಕ ಕೋಟಿ ದೇವರ್ಕಳು, ಅನೇಕ ಕೋಟಿ ಬ್ರಹ್ಮಾಂಡಂಗಳಡಗಿ ಆದಿಮಧ್ಯಾವಸಾನಗಳಿಲ್ಲದೆ ಅಖಂಡ ಪರಿಪೂರ್ಣ ಗೋಳಕಾಕಾರ ಅಪ್ರಮಾಣ ಅಗೋಚರ ಅಪ್ರಮೇಯ ಅವ್ಯಕ್ತ ಅನಂತತೇಜ ಅತ್ಯಂತಪ್ರಚಯ ಅನಂತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶ ಅನಂತಕೋಟಿ ಸಿಡಿಲೊಡೆದ ಬಯಲಪ್ರಕಾಶವಾಗಿಹರು ನೋಡಾ. ಇದಕ್ಕೆ ಶಿವಧರ್ಮ ಸೂತ್ರೇ: ತತ್ವ ಸಂಜ್ಞಾಃ ಅಸಂಖ್ಯಾತಾಃ ಅಸಂಖ್ಯಾತ ಅಂಬರಂ ತಥಾ | ಅಸಂಖ್ಯಾ ದೇವಮುನಯಃ ಲಿಂಗತತ್ವೇ ವಿಲೀಯಂತೇ || ಅಸಂಖ್ಯಾತ ಸೂರ್ಯಚಂದ್ರಾಗ್ನಿ ತಾರಾಖ್ಯ ದೈತ್ಯ ಮಾನವಾಃ | ಅಸಂಖ್ಯಾತ ಸುರೇಂದ್ರಾಣಾಂ ಲಿಂಗಗರ್ಭೇ ವಿಲೀಯತೇ || ಅಸಂಖ್ಯಾ ಮಹಾವಿಷ್ಣವಃ ಅಸಂಖ್ಯಾತ ಪಿತಾಮಹಾಃ | ಅಸಂಖ್ಯಾತ ಮಹದಾಕಾಶಂ ಲಂಗಗರ್ಭೇ ವಿಲೀಯತೇ ||'' ಇಂತೆಂದುದಾಗಿ, ಇದಕ್ಕೆ ಶಿವಧರ್ಮ ಪುರಾಣೇ: ಕಲ್ಪಾಂತೇ ತಸ್ಯ ದೇವಸ್ಯ ಲೀಯತೇ ಸರ್ವದೇವತಾ | ದಕ್ಷಿಣೇ ಲೀಯತೇ ಬ್ರಹ್ಮಾ ವಾಮಭಾಗೇ ಜನಾರ್ಧನಃ || ಹೃದಯೇ ಚೈವ ಗಾಯತ್ರೀ ಸರ್ವದೇವೋತ್ತಮೋತ್ತಮಃ | ಲೀಯತೇ ಮೂರ್ಧ್ನಿ ವೈವೇದಾ ಷಡಂಗಪದಕ್ರಮಾತ್ || ಜಠರೇ ಲೀಯತೇ ಸರ್ವಂ ಜಗತ್‍ಸ್ಥಾವರ ಜಂಗಮಂ || ಉತ್ಪಾದ್ಯತೇ ಘನಸ್ತಸ್ಮಾತ್ ಬ್ರಹ್ಮಾದ್ಯಂ ಸಚರಾಚರಂ ||'' ಇಂತೆಂದುದಾಗಿ. ಇದಕ್ಕೆ ಶಿವಲಿಂಗಾಗಮೇ: ಚಿದ್ವ್ಯೋಮ ಲಿಂಗಮಿತ್ಯಾಹುಃ ಚಿದ್ಭೂಮಿ ತಸ್ಯ ಪೀಠಿಕಾ | ಆಲಯಃ ಸರ್ವದೇವಾನಾಂ ಲಯಾನಾಂ ಲಿಂಗಮುಚ್ಯತೇ || ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ | ಉತ್ಪದ್ಯಂತೇ ಪುನಸ್ತಸ್ಮಾತ್ ಬ್ರಹ್ಮಾವಿಷ್ಣಾದಿ ದೇವತಾಃ ||'' ಇಂತೆಂದುದಾಗಿ, ಇದಕ್ಕೆ ಮಕುಟಾಗಮಸಾರೇ: ಆದಿಮಧ್ಯಾಂತ ಶೂನ್ಯಂ ಚ ಶೂನ್ಯ ಶೂನ್ಯಂ ದಶಾದಿಶಂ | ಸರ್ವಶೂನ್ಯಂ ನಿರಾಕಾರಂ ನಿದ್ರ್ವಂದ್ವಂ ಪರಮಂ ಪದಂ ||'' ಇಂತೆಂದುದಾಗಿ, ಇದಕ್ಕೆ ಉತ್ತರವಾತುಲಾಗಮೇ: ನ ಭೂಮಿರ್ನಜಲಂ ಚೈವ ನ ತೇಜೋ ನ ಚ ವಾಯುಚ | ನಚಾಕಾಶಂ ನ ಸೂರ್ಯಶ್ಚ ನಚ ಚಂದ್ರಮಇಂದ್ರಯೋ | ನ ಚ ಬ್ರಹ್ಮ ನ ವಿಶ್ವಂ ಚ ನಚೋ ನಕ್ಷತ್ರಕಾರಕಾ | ಏಕಮೇವ ಪರಂ ನಾಸ್ತಿ ಅಖಂಡಿತಮಹೋದಯಂ | ಸರ್ವಶೂನ್ಯಂ ನಿರಾಲಂಬಂ ಸ್ವಯಂ ಲಿಂಗಮಯಂ ಪರಂ ||'' ಇಂತೆಂದುದಾಗಿ, ಇದಕ್ಕೆ ರುದ್ರಕೋಟಿಸಂಹಿತಾಯಾಂ: ವಾಚಾತೀತಂ ಮನೋತೀತಂ ಭಾವಾತೀತಂ ಪರಂ ಶಿವಂ | ಸರ್ವಶೂನ್ಯಂ ನಿರಾಕಾರಂ ಸ್ವಯಂಭುರ್ಲಿಂಗಮೂರ್ತಯೇ ||'' ಇಂತೆಂದುದಾಗಿ, ಇದಕ್ಕೆ ಮಹಾಗಮಸಾರೇ: ಊರ್ಧ್ವಶೂನ್ಯಂ ಅಧಃ ಶೂನ್ಯಂ ಮಧ್ಯಶೂನ್ಯಂ ನಿರಾಮಯಂ | ಸರ್ವಶೂನ್ಯಂ ನಿರಾಕಾರಂ ಸ್ವಯಂಭುರ್ಲಿಂಗಮೂರ್ತಯೇ ||'' ಇಂತೆಂದುದಾಗಿ, ಇದಕ್ಕೆ ಆದಿ ನಾರಾಯಣ ಉವಾಚ: ನಮಸ್ತೇ ಜ್ಞಾನಲಿಂಗಾಯ ಶಿವಲಿಂಗಾಯ ಲಿಂಗಿನೇ | ನಮಸ್ತೇ ಗೂಢಲಿಂಗಾಯ ಪರಲಿಂಗಾಯ ಲಿಂಗಿನೇ || ಜಗತ್ಕಾರಣಲಿಂಗಾಯ ಜಗತಾಂ ಪತಯೇ ನಮಃ | ಆವಯೋಃ ಪತಯೇ ನಮಃ ನಿತ್ಯಂ ಪತೀನಾಂ ಪತಯೇ || ಅನಾದಿಮಲಸಂಸಾರೇ ರೋಗವೈದ್ಯಾಯ ಶಂಭವೇ | ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ || ಪ್ರಳಯಾಂಬುಧಿ ಸಂಸ್ಥಾಯ ಪ್ರಳಯೋತ್ಪತ್ಯಹೇತವೇ | ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ || ಆದಿಮಧ್ಯಾಂತಶೂನ್ಯಾಯ ಅಂಬರಸ್ಯಾಪಿ ಹೇತವೇ | ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ || ನಿಷ್ಕಳಾಯ ವಿಶುದ್ಧಾಯ ನಿತ್ಯಾನಂದಸ್ಯ ಹೇತವೇ | ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ || ನಿರ್ವಿಕಾರಾಯ ನಿತ್ಯಾಯ ಸತ್ಯಾಯ ಪರಮಾತ್ಮನೇ | ನಮಃಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ || ಓಂಕಾರಾಂತಾಯ ಸೂಕ್ಷ್ಮಾಯ ಸ್ತ್ರೀಪುಂಸಾಯಾತ್ಮ ರೂಪಣೇ | ನಮಃಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ || ಲೀಲಾತ್ಮಂಚ ದ್ವಯೋರ್ಮಧ್ಯೇ ಕಾಯಾತ್ಮರೂಪಣೇ | ನಮಃಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ ||'' ಇಂತೆಂದುದಾಗಿ, ಇದಕ್ಕೆ ಮಹಾದೇವ ಉವಾಚ: ವಾಚಾತೀತಂ ಮನೋತೀತಂ ವರ್ಣಾತೀತಂ ಪರಂ ಶಿವಂ | ಸರ್ವಶೂನ್ಯಂ ನಿರಾಕಾರಂ ನಿರಾಲಂಬಸ್ಯ ಲಿಂಗಯೋಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.