Index   ವಚನ - 236    Search  
 
ಇನ್ನು ಲಿಂಗೋತ್ಪತ್ಯವದೆಂತೆಂದಡೆ: ಆ ಅಖಂಡ ಮಹಾಜ್ಯೋತಿಪ್ರಣಮದ ತಾರಕಸ್ವರೂಪ ಕುಂಡಲಾಕಾರ ಜ್ಯೋತಿಸ್ವರೂಪದಲ್ಲಿ ಉತ್ಪತ್ಯವಾದ ಅಕಾರ ಉಕಾರ ಮಕಾರ- ಈ ಮೂರು ಬೀಜಾಕ್ಷರ. ಅಕಾರವೇ ಶಿವನು, ಉಕಾರವೇ ಶಿವತತ್ವ, ಮಕಾರವೇ ಪರವು. ಅಕಾರವೇ ನಾದವು, ಉಕಾರವೇ ಬಿಂದು, ಮಕಾರವೇ ಕಲೆ. ಈ ಆರೂ ನಾಮಂಗಳು ನಿಃಕಲತತ್ವ. ಆ ಪರಶಿವಶಕ್ತಿಯ ಸಂಕಲ್ಪದಿಂದ ನಾದ-ಬಿಂದು- ಕಲೆಸಂಯುಕ್ತವಾಗಿ ಅಖಂಡಲಿಂಗವಾಯಿತ್ತು. ಅದಕ್ಕೆ ಕರ ಚರಣ ಅವಯವಂಗಳೆಲ್ಲ ಅಖಂಡಸ್ವರೂಪ. ಇದಕ್ಕೆ ಚಿತ್ಪಿಂಡಾಗಮೇ: ಓಂಕಾರ ತಾರಕಾರೂಪಂ ಅಕಾರಂ ಚ ಪ್ರಜಾಯತೇ | ಓಂಕಾರಂ ಕುಂಡಲಾಕಾರಂ ಉಕಾರಂ ಚ ಪ್ರಜಾಯತೇ || ಓಂಕಾರಂ ಜ್ಯೋತಿರೂಪಂ ಚ ಮಕಾರಂ ಚ ಪ್ರಜಾಯತೇ | ಇತ್ಯಕ್ಷರತ್ರಯಂ ದೇವೀ ಸ್ಥಾನಸ್ಥಾನೇಷು ಜಾಯತೇ || ಅಕಾರೇ ಚ ಉಕಾರೇ ಚ ಮಕಾರೇ ಚಾಕ್ಷರತ್ರಯಂ | ಅಕಾರಂ ನಾದರೂಪೇಣ ಉಕಾರಂ ಬಿಂದುರುಚ್ಯತೇ || ಮಕಾರಂತು ಕಲಾಶ್ಚೈವ ನಾದಬಿಂದುಕಲಾತ್ಮನೇ | ನಾದಬಿಂದುಕಲಾಮಧ್ಯೇ ವೇದಲಿಂಗಸಮುದ್ಭವಃ || ಅಖಂಡಗೋಳಕಾಕಾರಂ ವೇದಪಂಚಕಸಂಜ್ಞಕಂ | ಅಖಿಲಾರ್ಣವ ಲಯಾನಾಂ ಲಿಂಗಮುಖ್ಯಂ ಪರಂ ತಥಾ || ಪರಂ ಗೂಢಂ ಶರೀರಸ್ಥಂ ಲಿಂಗಕ್ಷೇತ್ರಮನಾದಿವತ್ | ಯದೀದಮೀಶ್ವರಂ ತೇಜಃ ತಲ್ಲಿಂಗಂ ಪಂಚಸಂಜ್ಞಕಂ ||'' ಇಂತೆಂದುದಾಗಿ, ಇದಕ್ಕೆ ಈಶ್ವರ ಉವಾಚ: ಅಕಾರೋಕಾರ ಸಂಯೋಗ ತನ್ಮಧ್ಯೇ ಲಿಂಗರೂಪಕಂ | ಅವ್ಯಕ್ತ ಲಿಂಗಮಕಲ್ಪಂ ಗೋಳಕಾಕಾರಸಂಜ್ಞಕಂ || ನಾದೋಲಿಂಗಮಿತಿ ಜ್ಞೇಯಂ ಬಿಂದುಃ ಪಿಂಡಮುದಾಹೃತಂ | ನಾದಬಿಂದು ಯುಕ್ತರೂಪಂ ಜಗತ್ಸೃಷ್ಟ್ಯರ್ಥಕಾರಣಂ || ಚಿದ್ವ್ಯೋಮಲಿಂಗಮಿತ್ಯಾಹ ಚಿದ್ಭೂಮಿಸ್ತಸ್ಯ ಪೀಠಿಕಾ | ಆಲಯಂ ಸರ್ವಭೂತಾನಾಂ ಲಯನಾಂ ಲಿಂಗಮುಚ್ಯತೇ || ಲೀಯತೇ ಗಮ್ಯತೇ ಯತ್ರ ಯೇನ ಸರ್ವಂ ಚರಾಚರಂ | ತದೇಲ್ಲಿಂಗಮಿತ್ಯುಕ್ತಂ ಲಿಂಗತತ್ವಪರಾಯಣೈಃ || ಲಿಂಗಃ ಶಂಭುರಿತಿ ಜ್ಞೇಯಂ ಶಕ್ತಿಃ ಪೀಠಮುದಾಹೃತಂ | ಶಿವೇನ ಶಕ್ತಿಸಂಯೋಗಃ ಸೃಷ್ಟಿಸ್ಥಿತಿಲಯಾವಹಃ || ಲಿಂಗೇನ ಜಾಯತೇ ತತ್ರ ಜಗತ್ಸ್ಥಾವರಜಂಗಮಂ | ತಸ್ಮಾಲ್ಲಿಂಗೇ ವಿಶೇಕ್ಷೀಣ ಲಿಂಗರೂಪಮುದಾಹೃತಂ || ಅಸಂಖ್ಯಾತಮಹಾವಿಷ್ಣು ಅಸಂಖ್ಯಾತಪಿತಾಮಹಃ | ಅಸಂಖ್ಯಾತಾ ಸುರೇಂದ್ರಾಶ್ಚ ಲೀಯಂತೇ ಸರ್ವದೇವತಾಃ || ವಿಷ್ಣು ಸಂಜ್ಞಾ ಅಸಂಖ್ಯಾತಾಃ ಅಸಂಖ್ಯಾತ ಕವಿಕಾಮಃ | ಅಸಂಖ್ಯಾ ದೇವಮುನಯೋ ಗಮ್ಯತೇ ಸರ್ವದೇವತಾಃ || ಲೀಯತೇ ಗಮ್ಯತೇ ಯತ್ರ ಯೇನ ಸರ್ವಂ ಚರಾಚರಂ | ತದೇತಲ್ಲಿಂಗಮಿತ್ಯಾಹುರ್ಲಿಂಗತತ್ವಪರಾಯಣೈಃ ||'' ಇಂತೆಂದುದಾಗಿ, ಇದಕ್ಕೆ ಪ್ರಣವಾನಂದ ಸೂಕ್ತಿ: ಶ್ರೀ ಮಹಾದೇವ ಉವಾಚ- ಆದಿ ಓಂಕಾರಪೀಠಂ ಚ ಅಕಾರಂ ಕಂಠ ಉಚ್ಯತೇ | ಉಕಾರಂ ಗೋಮುಖಂ ಚೈವ ಮಕಾರಂ ವರ್ತುಲಂ ತಥಾ || ನಾದಬಿಂದುಮಹಾತೇಜಂ ನಾದಂ ಅಖಂಡಲಿಂಗಕಃ | ಆದಿಮಧ್ಯಾಂತರಹಿತಂ ಅಪ್ರಮೇಯಂ ಅನಾಮಯಂ || ಅಸಂಖ್ಯಾತಸೂರ್ಯಚಂದ್ರಾಗ್ನಿ ಅಸಂಖ್ಯಾತ ತಟಿತ್ಕೋಟಿ ಪ್ರಭಃ | ಅವ್ಯಕ್ತಂ ಅಮಲಂ ಶೂನ್ಯಂ ಅಪ್ರಮಾಣಮಗೋಚರಂ || ನಿರ್ನಾಮಂ ನಿರ್ಗುಣಂ ನಿತ್ಯಂ ನಿರಂಜನಂ ನಿರಾಮಯಂ | ಇತಿ ಲಿಂಗಸ್ಥಲಂತು ದುರ್ಲಭಂ ಕಮಲಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.