ಪಂಚಮುಖ ದಶಭುಜವನುಳ್ಳ ಸದಾಶಿವನ ನಿರ್ಭಾವಮುಖದಲ್ಲಿ
ಆತ್ಮನುತ್ಪತ್ಯವಾಯಿತ್ತು.
ಆ ಸದಾಶಿವನ ಈಶಾನಮುಖದಲ್ಲಿ ಆಕಾಶ ಉತ್ಪತ್ಯವಾಯಿತ್ತು.
ಆ ಸದಾಶಿವನ ತತ್ಪುರುಷಮುಖದಲ್ಲಿ ವಾಯು ಉತ್ಪತ್ಯವಾಯಿತ್ತು.
ಆ ಸದಾಶಿವನ ಅಘೋರಮುಖದಲ್ಲಿ ಅಗ್ನಿ ಉತ್ಪತ್ಯವಾಯಿತ್ತು.
ಆ ಸದಾಶಿವನ ವಾಮದೇವಮುಖದಲ್ಲಿ ಅಪ್ಪು ಉತ್ಪತ್ಯವಾಯಿತ್ತು.
ಆ ಸದಾಶಿವನ ಸದ್ಯೋಜಾತಮುಖದಲ್ಲಿ ಪೃಥ್ವಿ ಉತ್ಪತ್ಯವಾಯಿತ್ತು.
ಆ ಸದಾಶಿವನ ಮನಸ್ಸಿನಲ್ಲಿ ಚಂದ್ರನುತ್ಪತ್ಯವಾಯಿತ್ತು.
ಆ ಸದಾಶಿವನ ಚಕ್ಷುವಿನಲ್ಲಿ ಸೂರ್ಯನುತ್ಪತ್ಯವಾದನು ನೋಡಾ.
ಇದಕ್ಕೆ ಈಶ್ವರೋsವಾಚ:
ಸದ್ಯೋಜಾತಸ್ತಥಾಭೂಮಿ ವಾಮದೇವೋದ್ಭವೇ ಜಲಂ |
ಅಘೋರಾದ್ವಹ್ನಿರಿತ್ಯುಕ್ತಂ ತತ್ಪುರುಷಾದ್ವಾಯುರುಚ್ಯತೇ ||
ಈಶಾನ್ಯದ್ಗಗನಾಕಾರಂ ಪಂಚಬ್ರಹ್ಮಮಯಂ ಜಗತ್ |
ಚಂದ್ರಮಾ ಮನಸೋಃ ಜಾತ ಚಕ್ಷುಃ ಸೂರ್ಯೋ ಅಜಾಯತ |
ಆತ್ಮಾ ಗುಹ್ಯಮುಖಾಜ್ಜಾತಃ ಇತಿ ಭೇದಂ ವರಾನನೇ ||''
ಇಂತೆಂದುದಾಗಿ,
ಇದಕ್ಕೆ ಶ್ರೀಮಹಾದೇವ ಉವಾಚ:
ಭೂಜಲಾಗ್ನಿ ಮರುದ್ವ್ಯೋಮ ಭಾಸ್ಕರೋ ಶಶಿಶೇಖರಃ |
ದಿವಿಪ್ರಕಾಶತೇ ಸೂರ್ಯಃ ರಾತ್ರೌ ಚಂದ್ರಃಪ್ರಕಾಶತೇ |
ಸರ್ವಚೈತನ್ಯಮಾತ್ಮಾನಂ ಶಿವಾಂಶೋsಷ್ಟಮೂರ್ತಯಃ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Pan̄camukha daśabhujavanuḷḷa sadāśivana nirbhāvamukhadalli
ātmanutpatyavāyittu.
Ā sadāśivana īśānamukhadalli ākāśa utpatyavāyittu.
Ā sadāśivana tatpuruṣamukhadalli vāyu utpatyavāyittu.
Ā sadāśivana aghōramukhadalli agni utpatyavāyittu.
Ā sadāśivana vāmadēvamukhadalli appu utpatyavāyittu.
Ā sadāśivana sadyōjātamukhadalli pr̥thvi utpatyavāyittu.
Ā sadāśivana manas'sinalli candranutpatyavāyittu.
Ā sadāśivana cakṣuvinalli sūryanutpatyavādanu nōḍā.
Idakke īśvarōsvāca:
Sadyōjātastathābhūmi vāmadēvōdbhavē jalaṁ |
aghōrādvahnirityuktaṁ tatpuruṣādvāyurucyatē ||
īśān'yadgaganākāraṁ pan̄cabrahmamayaṁ jagat |
candramā manasōḥ jāta cakṣuḥ sūryō ajāyata |
ātmā guhyamukhājjātaḥ iti bhēdaṁ varānanē ||''
intendudāgi,
idakke śrīmahādēva uvāca:
Bhūjalāgni marudvyōma bhāskarō śaśiśēkharaḥ |
diviprakāśatē sūryaḥ rātrau candraḥprakāśatē |
sarvacaitan'yamātmānaṁ śivānśōsṣṭamūrtayaḥ ||''
intendudāgi,
apramāṇakūḍalasaṅgamadēvā.