Index   ವಚನ - 246    Search  
 
ಇನ್ನು ಸ್ತ್ರೀಯರುಗಳಿಂದ ಜನನವಾದ ಶಿಶುಗಳ ಭೇದವಂ ಪೇಳ್ವೆ ಅದೆಂತೆಂದಡೆ: ಸ್ತ್ರೀಗೆ ರಜಸ್ವಲೆಯಾದ ತ್ರಿವಿಧದಿನಕ್ಕೆ ಗರ್ಭವಾಗಿ ಹುಟ್ಟಿದ ಮಗನು ಚೋರನಹನು, ಚತುರ್ಥದಿನಕ್ಕೆ ಪಾಪಿಯಹನು, ಪಂಚದಿನಕ್ಕೆ ಬುದ್ಧಿವಂತನಹನು, ಷಷ್ಠಿದಿನಕ್ಕೆ ವ್ರತಗೇಡಿಯಹನು, ಸಪ್ತದಿನಕ್ಕೆ ದಯಾಪರನಹನು, ಅಷ್ಟಮದಿನಕ್ಕೆ ದರಿದ್ರನಹನು, ನವಮದಿನಕ್ಕೆ ಧನಿಕನಹನು, ದಶದಿನಕ್ಕೆ ಕಾಮಿಯಹನು, ಏಕಾದಶದಿನಕ್ಕೆ ವ್ಯಾಧಿಪೀಡಿತನಹನು, ದ್ವಾದಶದಿನಕ್ಕೆ ಪಂಡಿತನಹನು, ತ್ರಯೋದಶದಿನಕ್ಕೆ ವಿವೇಕಿಯಹನು, ಚತುರ್ದಶದಿನಕ್ಕೆ ಭೋಗಿಯಹನು, ಪಂಚಾದಶದಿನಕ್ಕೆ ರಾಜನಹನು, ಷೋಡಶದಿನಕ್ಕೆ ಶಿವಯೋಗಿಯಹನು ನೋಡಾ ಅಪ್ರಮಾಣಕೂಡಲಸಂಗಮದೇವಾ.