Index   ವಚನ - 250    Search  
 
ಇನ್ನು ಆಯುಷ್ಯಂಗಳ ಭೇದವೆಂತೆಂದಡೆ: ಸ್ತ್ರೀ ಪುರುಷರಿಗೆಯು ಸ್ವರ ಐದುಗಳಿಗೆ ನಡೆದಡೆ, ಆಯುಷ್ಯ ನೂರವರುಷ. ನಾಲ್ಕುಗಳಿಗೆ ನಡೆದಡೆ ಆಯುಷ್ಯ ಎಂಬತ್ತುವರುಷ. ಮೂರುಗಳಿಗೆ ನಡೆದಡೆ ಆಯುಷ್ಯ ಅರುವತ್ತುವರುಷ. ಎರಡುಗಳಿಗೆ ನಡೆದಡೆ ಆಯುಷ್ಯ ನಾಲ್ವತ್ತುವರುಷ. ಒಂದುಗಳಿಗೆ ನಡೆದಡೆ ಆಯುಷ್ಯ ಇಪ್ಪತ್ತುವರುಷ. ಅರೆಗಳಿಗೆ ನಡೆದಡೆ ಆಯುಷ್ಯ ಹತ್ತುವರುಷ. ಕಾಲುಗಳಿಗೆ ನಡೆದಡೆ ಆಯುಷ್ಯ ಐದುವರುಷ. ಇಂತೀ ಕ್ರಮದಿಂದ ನೋಡಿಕೊಂಬುದು ಅಪ್ರಮಾಣಕೂಡಲಸಂಗಮದೇವಾ.