Index   ವಚನ - 251    Search  
 
ಇನ್ನು ಆ ಶುಕ್ಲ ಸ್ತ್ರೀ ಪುರುಷರ ಸಂಯೋಗದಿಂದ ಮಾರುತ ನೂಂಕಲು ಚೈತನ್ಯ ಬೀಜವು ಆ ಶುಕ್ಲವು ಸ್ತ್ರೀಯ ಶೋಣಿತದಲ್ಲಿ ಬಿದ್ದು ಏಕೀಭೂತವಾಯಿತ್ತು ನೋಡಾ. ಇದಕ್ಕೆ ಈಶ್ವರ ಉವಾಚ: ಚೈತನ್ಯಂ ಬೀಜರೂಪಂ ಚ ಶುಕ್ಲಂ ರಕ್ತಂ ತಥಾ ಜಲಂ | ಏಕೀಭೂತಂ ಯಥಾ ಕಾಲೇ ತಥಾ ಕಾಲೇ ಪ್ರರೋಪತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.