ಸುಕರ್ಮದಿಂದ ದೇವತಾಯೋನಿಯಲ್ಲಿ ಜನಿಸುವನು.
ದುಷ್ಕರ್ಮದಿಂದ ಎಂಬತ್ತುನಾಲ್ಕುಲಕ್ಷ ಜೀವರಾಶಿಗಳ
ಕ್ರೂರಯೋನಿಯಲ್ಲಿ ಜನಿಸುವನು.
ಸುಕರ್ಮ ದುಷ್ಕರ್ಮ ಎರಡರ ಮಿಶ್ರಣದಿಂದ
ಮನುಜಯೋನಿಯಲ್ಲಿ ಜನಿಸುವನು.
ಇಂತಪ್ಪ ಸುಕರ್ಮ ದುಷ್ಕರ್ಮಗಳು
ಪೂರ್ವಕರ್ಮವಶದಿಂದ ಬಹವು ನೋಡಾ.
ಇದಕ್ಕೆ ಸೂತಸಂಹಿತಾಯಾಂ:
ಪುಣ್ಯಾದ್ದೇವತ್ವಮಾಪ್ನೋತಿ ಪಾಪಾತ್ ಸ್ಥಾವರತಾಮಿಯಾತ್ |
ಸಮಾಭ್ಯಾಂ ಪಾಪಪುಣ್ಯಾಭ್ಯಾಂ ಮಾನುಷ್ಯೇ ಪರಿರ್ವರ್ತತೇ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Sukarmadinda dēvatāyōniyalli janisuvanu.
Duṣkarmadinda embattunālkulakṣa jīvarāśigaḷa
krūrayōniyalli janisuvanu.
Sukarma duṣkarma eraḍara miśraṇadinda
manujayōniyalli janisuvanu.
Intappa sukarma duṣkarmagaḷu
pūrvakarmavaśadinda bahavu nōḍā.
Idakke sūtasanhitāyāṁ:
Puṇyāddēvatvamāpnōti pāpāt sthāvaratāmiyāt |
samābhyāṁ pāpapuṇyābhyāṁ mānuṣyē parirvartatē ||''
intendudāgi,
apramāṇakūḍalasaṅgamadēvā.