Index   ವಚನ - 264    Search  
 
ಇನ್ನು ಸಪ್ತಸಮುದ್ರಂಗಳ ವಿವರವೆಂತೆಂದಡೆ: ಮೂತ್ರವೆ ಲವಣಸಮುದ್ರ; ಅಮೃತವೆ ಕ್ಷೀರಸಮುದ್ರ; ಶ್ಲೇಷ್ಮವೆ ದಧಿಸಮುದ್ರ; ಮಜ್ಜೆಯೇ ಘೃತಸಮುದ್ರ, ಮಾಂಸವೆ ರಸಸಮುದ್ರ; ಶೋಣಿತವೆ ಸುರೆಯ ಸಮುದ್ರ; ಲಂಬಿಕಾಸ್ಥಾನದ ಸ್ವಾದೋದಕವೆ ಸ್ವಾದೋದಕಸಮುದ್ರ. ಇದಕ್ಕೆ ಶ್ರೀ ಮಹಾದೇವ ಉವಾಚ: ಕ್ಷಾರೋದಧಿ ತಥಾ ಮೂತ್ರೇ ಕ್ಷೀರೇ ಕ್ಷೀರೋದಸಾಗರಃ | ದಧ್ಯರ್ಣವಃ ತಥಾ ಶ್ಲೇಷ್ಮಃ ಮಜ್ಜಾಯಾಂ ಸರ್ಪಿಷಾರ್ಣವಃ || ರಸೋದಧಿಃ ಸ್ಥಾವರೇ ಚ ಶೋಣಿತೇ ಚ ಸುರೋದಧಿಃ | ಸ್ವಾದುದೋ ಲಂಬಿಕಾಸ್ಥಾನೇ ಗರ್ಭೋದಸ್ಯ ಸಪ್ತಸಾಗರಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.