Index   ವಚನ - 263    Search  
 
ಇನ್ನು ಸಪ್ತದ್ವೀಪಂಗಳ ಸ್ಥಾನವದೆಂತೆಂದಡೆ: ಅಸ್ಥಿಸ್ಥಾನದಲ್ಲಿ ಜಂಬೂದ್ವೀಪವಿಹುದು. ಮೇದಸ್ಥಾನದಲ್ಲಿ ಪ್ಲಕ್ಷದ್ವೀಪವಿಹುದು. ಮಾಂಸಸ್ಥಾನದಲ್ಲಿ ಕುಶದ್ವೀಪವಿಹುದು. ಶಿರಸ್ಥಾನದಲ್ಲಿ ಕ್ರೌಂಚದ್ವೀಪವಿಹುದು. ತ್ವಚಸ್ಥಾನದಲ್ಲಿ ಶಾಲ್ಮಲೀದ್ವೀಪವಿಹುದು. ರೋಮಸಂಚದಲ್ಲಿ ಗೋಮೇಧದ್ವೀಪವಿಹುದು. ನಖಸ್ಥಾನದಲ್ಲಿ ಪುಷ್ಕರದ್ವೀಪವಿಹುದು. ಇದಕ್ಕೆ ಶ್ರೀಮಹಾಭಗವಾನ ಉವಾಚ: ಅಸ್ಥಿಸ್ಥಾನೇ ಸ್ಥಿತೋ ಜಂಬೂರ್ಮೇದಸ್ಥಾಪ್ಲಕ್ಷಸಂಜ್ಞಕಃ | ಕುಶದ್ವೀಪಸ್ಥಿತೋ ಮಾಂಸೇ ಕ್ರೌಂಚದ್ವೀಪಃ ಶಿರಸುಚ || ತ್ವಚಾಯಾಂ ಶಾಲ್ಮಲೀದ್ವೀಪಾಃ ಮೇಧೋ ರೋಮಸಾ ಭವೇತ್ | ನಖಸ್ಥಂ ಪುಷ್ಕರಂ ವಿದ್ಯಾತ್ ಸಾಗರಾಸ್ಥಾನನಂತರಂ || ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.