Index   ವಚನ - 266    Search  
 
ಇನ್ನು ನಕ್ಷತ್ರ ನವಗ್ರಹಗಳ ಸ್ಥಾನವೆಂತೆಂದಡೆ: ನಾದಚಕ್ರದಲ್ಲಿ ಸೂರ್ಯನಿಹನು, ಬಿಂದುಚಕ್ರದಲ್ಲಿ ಚಂದ್ರನಿಹನು. ಅಧೋನಾಭಿಯಲ್ಲಿ ಮಂಗಳನಿಹನು, ಹೃದಯಸ್ಥಾನದಲ್ಲಿ ಬುಧನಿಹನು, ಗುಹ್ಯಸ್ಥಾನದಲ್ಲಿ ಬೃಹಸ್ಪತಿ ಇಹನು, ಕಲಾಚಕ್ರದಲ್ಲಿ ಶುಕ್ರನಿಹನು, ನಾಭಿಸ್ಥಾನದಲ್ಲಿ ಶನೀಶ್ವರನಿಹನು, ಮುಖದಲ್ಲಿ ರಾಹು ಇಹನು, ನಾದಸ್ಥಾನದಲ್ಲಿ ಕೇತು ಇಹನು. ಇಂತು ನವಗ್ರಹಂಗಳು, ಒಂದೊಂದು ಗ್ರಹಂಗಳಲ್ಲಿ ತ್ರಿತ್ರಿನಕ್ಷತ್ರಂಗಳು ಇಹವು. ಇದಕ್ಕೆ ಈಶ್ವರ ಉವಾಚ: ನಾದಚಕ್ರಸ್ಥಿತೋ ಸೂರ್ಯಃ ಬಿಂದುಚಕ್ರೇ ಚ ಚಂದ್ರಮಾಃ | ಚೋನಾಭ್ಯಾಂತುಚೋ ಜ್ಞೇಯಂ ಹೃದಯೇ ಚ ಬುಧಸ್ಮೃತಃ || ಗುಹ್ಯಸ್ಥಾನೇ ಗುರುಂ ವಿದ್ಯಾತ್ ಚಕ್ರೇ ಕಲಾ ಶುಕ್ರಸಮಾಶ್ರಿತಃ | ನಾಭಿಸ್ಥಾನೇ ಸ್ಥಿತೋ ಮಂದಃ ಮುಖಾಂತೇ ರಾಹುರಾಶ್ರಿತಃ || ನಾದಸ್ಥಾನೇ ಸ್ಥಿತೋ ಕೇತುಃ ಅಸ್ತಿನಾಹಿಸ್ತಯಶ್ರಯಃ | ವಿಭವತ್ಸಮಾಖ್ಯಾತ ಆಪಾದಸ್ಥಲಮಸ್ತಕೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.