Index   ವಚನ - 267    Search  
 
ಇನ್ನು ಭೂತನಾಯಕರ ಸ್ಥಾನವೆಂತೆಂದಡೆ: ಹೃದಯಸ್ಥಾನದಲ್ಲಿ ಬ್ರಹ್ಮನಿಹನು, ಕಂಠಸ್ಥಾನದಲ್ಲಿ ವಿಷ್ಮುವಿಹನು, ಭ್ರೂಮಧ್ಯದಲ್ಲಿ ರುದ್ರನಿಹನು, ಭ್ರೂಮಧ್ಯೋರ್ಧ್ವೆ ಈಶ್ವರನಿಹನು, ಲಲಾಟಾಂತದಲ್ಲಿ ಸದಾಶಿವನಿಹನು. ಇದಕ್ಕೆ ಶ್ರೀ ಮಹಾದೇವ ಉವಾಚ: ಹೃದಿ ಸ್ಥಾನೇ ಸ್ಥಿತೋಬ್ರಹ್ಮಾಃ ಕಂಠೇ ವಿಷ್ಣುಃ ಸಮಾಶ್ರಿತಃ | ಭ್ರೂಮಧ್ಯೇ ಸಂಸ್ಥಿತೋ ರುದ್ರಃ ತಸ್ಯೋರ್ಧ್ವೇ ಈಶ್ವರ ಸ್ಮೃತಃ | ಸದಾಶಿವೋ ಲಲಾಟೆ ತು ಪಂಚೈತೇ ಭೂತನಾಯಕಾಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.