ಇನ್ನು ನಾಡಿಧಾರಣವೆಂತೆಂದಡೆ:
ಎಪ್ಪತ್ತೆರಡು ಸಾವಿರ ನಾಡಿಗಳೊಳು ಮೂವತ್ತೆರಡು ನಾಡಿ ಮುಖ್ಯವಾಗಿಹುದು.
ಆ ಮೂವತ್ತೆರಡು ನಾಡಿಗಳೊಳು
ಚತುರ್ದಶನಾಡಿಗಳು ಪ್ರಧಾನನಾಡಿಗಳಾಗಿಹವು.
ಆ ಚತುರ್ದಶನಾಡಿಗಳೊಳು ಮೂರುನಾಡಿ ಮುಖ್ಯವಾಗಿಹುದು.
ಆ ಮೂರು ನಾಡಿಗಳೊಳು ಒಂದುನಾಡಿ ಮುಖ್ಯವಾಗಿಹುದು.
ಆ ಒಂದು ನಾಡಿಯ ಯೋಗಿಗಳು ಬ್ರಹ್ಮನಾಡಿಯೆಂಬರು ನೋಡಾ
ಅಪ್ರಮಾಣಕೂಡಲಸಂಗಮದೇವಾ.