Index   ವಚನ - 274    Search  
 
ಭಾನುಕಿರಣಂಗಳು ಸರ್ವರ್ಲೋಕಂಗಳ ತುಂಬಿಕೊಂಡಿಹುದು. ಅದರ ಹಾಂಗೆ ಬ್ರಹ್ಮನಾಡಿ ಸರ್ವಾಂಗವೆಲ್ಲವ ತುಂಬಿ ಆಧಾರಚಕ್ರಂಗಳಾರನು ಹಾಯ್ದು, ಬ್ರಹ್ಮರಂಧ್ರವ ಮುಟ್ಟಿ, ನಾದ ಬಿಂದುಗಳಿಗೆ ಆಶ್ರಯವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.