Index   ವಚನ - 276    Search  
 
ಎಲ್ಲಾ ನಾಡಿಗಳಂ ಕೆಡೆಮೆಟ್ಟಿ ಬ್ರಹ್ಮನಾಡಿಯ ಒಳಹೊಕ್ಕು ನೋಡಲು ಅಲ್ಲಿ ಓಂಕಾರಜ್ಯೋತಿಯುಂಟು ನೋಡಾ. ಆ ಓಂಕಾರಜ್ಯೋತಿಯಲ್ಲಿ ಮನಮಗ್ನಯೋಗವೇ ಯೋಗ, ಮಿಕ್ಕಿನ ಯೋಗಂಗಳಲ್ಲಿ ಮನಮಗ್ನವಿಲ್ಲ ನೋಡಾ ಅಪ್ರಮಾಣಕೂಡಲಸಂಗಮದೇವಾ.