Index   ವಚನ - 281    Search  
 
ಪಿಂಗಳನಾಳವ ಮುಚ್ಚಿ ಇಡಾನಾಳದಲ್ಲಿ ತೆಗೆದು, ಪಿಂಗಳನಾಳದಲ್ಲಿ ಮೆಲ್ಲಮೆಲ್ಲನೆ ಬಿಡುವುದು. ಇಡಾನಾಳವ ಮುಚ್ಚಿ ಪಿಂಗಳನಾಳದಲ್ಲಿ ತೆಗೆದು, ಇಡಾನಾಳದಲ್ಲಿ ಮೆಲ್ಲಮೆಲ್ಲನೆ ಬಿಡುವುದು. ಹೀಂಗೆ ಪೂರಿಸಿ ಪೂರಿಸಿ ರೇಚಿಸಲು ಉಕ್ಕುವದು ನೋಡಾ ಪೂರಕದೊಳು ಅಪ್ರಮಾಣಕೂಡಲಸಂಗಮದೇವಾ.