Index   ವಚನ - 329    Search  
 
ಗುರುಕರುಣದಿಂದ ವಿಭೂತಿಯ ಪಟ್ಟವಂ ಕಟ್ಟಿ ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞಾ ಬ್ರಹ್ಮರಂಧ್ರ ಶಿಖಾಚಕ್ರ ಪಶ್ಚಿಮಚಕ್ರ ನಾದಚಕ್ರ ಬಿಂದುಚಕ್ರ ಕಲಾಚಕ್ರವೆಂಬ ದ್ವಾದಶಚಕ್ರಂಗಳ ದಳ-ವರ್ಣ-ಅಕ್ಷರಂಗಳಂ ನ್ಯಾಸವಮಾಡಿ ತೋರಿದಬಳಿಕ ಆ ಶಿವಭಕ್ತನೆ ಶಿವನು, ಆತನ ಮರ್ತ್ಯನೆಂದರೆ ನಾಯಕನರಕ ತಪ್ಪದು ಕಾಣಾ ಅಪ್ರಮಾಣಕೂಡಲಸಂಗಮದೇವಾ.