Index   ವಚನ - 336    Search  
 
ಇನ್ನು ಲಿಂಗಧಾರಣ ಮಹಾತ್ಮೆಯ ಸ್ಥಲವೆಂತೆಂದಡೆ: ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಮೊದಲಾದ ಸಮಸ್ತಗಣಂಗಳೆಲ್ಲರು ಶಿವಲಿಂಗಧಾರಣವಾಗಿ ಶಿವಪೂಜೆಯ ಮಾಡಿದರು ನೋಡಾ. ಚಂದ್ರಾದಿತ್ಯ ಇಂದ್ರಾದಿ ದೇವರ್ಕಳೆಲ್ಲರು ಶಿವಲಿಂಗಧಾರಣವಾಗಿ ಶಿವಪೂಜೆಯ ಮಾಡಿದರು ನೋಡಾ. ಮನು ಮುನಿ ಯತಿ ರಾಕ್ಷಸರು ಮೊದಲಾಗಿ ಶಿವಲಿಂಗಧಾರಣವಾಗಿ ಶಿವಪೂಜೆಯಮಾಡಿ, ಶಿವಪ್ರಸಾದವ ಕೊಂಡು ತಮ್ಮ ತಮ್ಮ ಪದವಿಯ ಪಡೆದು ಬದುಕಿದರು ನೋಡಾ. ಇದಕ್ಕೆ ಶಿವಧರ್ಮಪುರಾಣೇ: ``ಇಂದ್ರ ನೀಲಮಯಂ ಲಿಂಗಂ ವಿಷ್ಣುಃ ಪೂಜಯತೇ ಸದಾ | ವಿಷ್ಣುತ್ವಂ ಪ್ರಾಪ್ಯತೇ ತೇನ ಸಾದ್ಭುತಂ ಚ ಸನಾತನಂ || ಬ್ರಹ್ಮಾ ಪೂಜಯತೇ ನಿತ್ಯಂ ಲಿಂಗಂ ಶೈಲಮಯಂ ಶುಭಂ | ತಸ್ಯ ಸಂಪೂಜನಾತ್ತೇನ ಪ್ರಾಪ್ತಂ ಬ್ರಾಹ್ಮತ್ವಮುತ್ತಮುಂ || ಮುಕ್ತಾಫಲಮಯಂ ಲಿಂಗಂ ಸೋಮಃ ಪೂಜಯತೇ ಸದಾ | ತೇನ ಸೋಮೇನ ಸಂಪ್ರಾಪ್ತಂ ಸೋಮತ್ವಂ ಸತತೋಜ್ಜಲಂ || ಶಕ್ರೋsಪಿ ದೇವರಾಜೇಂದ್ರೋ ಲಿಂಗಂ ಮಣಿಮಯಂ ಶುಭಂ | ಭಕ್ತ್ಯಾ ಪೂಜಯತೇ ನಿತ್ಯಂ ತೇನ ಶಕ್ರತ್ವಮಾಪ್ತವಾನ್ || ಲಿಂಗಂ ರತ್ನಮಯಂ ಚಾರು ವರುಣೋsರ್ಚಯತೇ ಸದಾ | ತೇನ ತದ್ವರುಣತ್ವಂ ಹಿ ಪ್ರಾಪ್ತಂ ವೃದ್ಧಿಸಮನ್ವಿತಂ || ಲಿಂಗಂ ಹೇಮಮಯಂ ಕಾಂತಂ ಧನದೋsರ್ಚಯತೇ ಸದಾ | ತೇನಾsಸೌಧನದೋ ದೇವೋ ಧನದತ್ವಮವಾಪ್ತವಾನ್ || ಸಂಪೂಜ್ಯ ಕಾಂಸ್ಯಕಂ ಲಿಂಗಂ ವಸವಃ ಕಾಮಮಾಪ್ನುಯುಃ | ನಾಗಾಃ ಪ್ರವಾಲಜಂ ಲಿಂಗಂ ರಾಜ್ಯಂ ಸಂಪೂಜ್ಯ ಲೇಭಿರೇ | ಏವಂ ದೇವಾಃ ಸ ಗಂಧರ್ವಾಃ ಸ ಯಕ್ಷೋರಗರಾಕ್ಷಸಾಃ | ಪೂಜಯಂತಿ ಸದಾಕಾಲಮೀಶಾನಂ ಸುರನಾಯಕಂ || ಸರ್ವಂ ಲಿಂಗಮಯಂ ಲೋಕೇ ಸರ್ವಂ ಲಿಂಗೇ ಪ್ರತಿಷ್ಠಿತಂ | ತಸ್ತಾತ್ ಸಂಪೂಜ್ಯಯೇನ್ನಿತ್ಯಂ ಯದಿಚ್ಛೇತ್ ಸಿದ್ಧಿಮಾತ್ಮನಃ ||'' ಇಂತೆಂದುದಾಗಿ, ಇದಕ್ಕೆ ವ್ಯಾಸ ಜೈಮಿನಿ ಸಂವಾದೇ:ವ್ಯಾಸ ಉವಾಚ- ``ಇತಿಹಾಸೇಷು ವೇದೇಷು ಪುರಾಣೇಷು ಪುರಾತನೈಃ | ಮಹರ್ಷಿಭಿರ್ಮಹಾದೇವೋ ಶಿವಲಿಂಗಂತು ಧಾರಯೇತ್ || ಸುರಾಸುರೇಂದ್ರದೇವಾಶ್ಚ ಲಿಂಗಧಾರಣಯಾ ಸದಾ | ತಥಾಗಸ್ತ್ಯಾದಿ ಮುನಯೋ ದೂರ್ವಾಸು ನಂದಿಕೇಶ್ವರಃ | ಮಹಾಕಾಲೋ ದಧೀಚಿಶ್ಚ ಪಾಣಿನಿಶ್ಚ ಕಣಾದಕಃ | ಸ್ಕಂದೋ ಭೃಂಗಿರೀಟರ್ವೀರಭದ್ರಾಶ್ಚ ಪ್ರಮಥಾದಯಃ || ಅಜೋ ಹರಿಃ ಸಹಸ್ರಾಕ್ಷೋ ಬಾಣಾಸುರದಶಾನನೌ | ವಶಿಷ್ಠರುರುವಾಲ್ಮೀಕಿಭಾರದ್ವಾಜಾತ್ರಿಗೌತಮಾಃ || ಏತೇ ಪರಮಶೈವಾಶ್ಚ ಭಜಂತಿ ಪರಯಾ ಮುದಾ | ಪ್ರಸಾದ ಸೇವನಾತ್ ಧ್ಯಾನಾದರ್ಚನಾದ್ಧಾರಣಾದಪಿ ||'' ಇಂತೆಂದುದಾಗಿ, ಇದಕ್ಕೆ ವಾತುಲತಂತ್ರೇ: ``ಬ್ರಹ್ಮವಿಷ್ಣುಸುರೇಶಾದಿ ದೇವತಾಃ ಪರಯಾ ಮುದಾ | ಶಿರೋಭಿರ್ಧಾರಯಂತ್ಯೇತಾಃ ಶಿವಲಿಂಗಮಹರ್ನಿಶಂ || ಪಾಣಿನಿಶ್ಚ ಕಣಾದಶ್ಚ ಕಪಿಲೋ ಗೌತಮಾದಯಃ | ಪ್ರಸಾದಸೇವನಾದ್ಧ್ಯಾನಾದರ್ಚನಾದ್ಧಾರಣಾದಪಿ || ಕಂಠೇಷು ಹರಕಂಠಾದಿ ಮುನಯೋ ಮಾನವಾಸ್ತಥಾ | ಸರ್ವದಾ ಶಿವಲಿಂಗಂತು ಧಾರಯಂತಿ ಯಜಂತಿ ಚ ||'' ಇಂತೆಂದುದಾಗಿ, ಇದಕ್ಕೆ ಈಶ್ವರೋsವಾಚ: ``ಉತ್ತಮಾಂಗೇ ಗಲೇ ಕಕ್ಷೇ ಸರ್ವದಾ ಧಾರಯೇತ್ ಶಿವಂ | ಮಂತ್ರಾದ್ಯುತ್ಪಾರ್ಜನೇಯುವೇ ಭೋಜನೇsಪಿ ಸದಾ ಶುಚಿಃ ||'' ಇಂತೆಂದುದಾಗಿ, ಇದಕ್ಕೆ ಈಶ್ವರೋsವಾಚ: ``ಗಚ್ಚನ್ ತಿಷ್ಠನ್ ಸ್ವಪನ್ ಜಾಗ್ರನ್ ಉನ್ಮಿಷನ್ ನಿಮಿಷನ್ನಪಿ | ಶುಚಿರ್ವಾಪ್ಯಶುಚಿರ್ವಾಪಿ ಲಿಂಗಂ ಸರ್ವತ್ರ ಧಾರಯೇತ್ ||'' ಇಂತೆಂದುದಾಗಿ, ಇದಕ್ಕೆ ಶ್ರೀ ಮಹಾದೇವ ಉವಾಚ: ``ಉದರೇ ಧಾರಯೇಲ್ಲಿಂಗಂ ಗ್ರಾಮಸ್ಯಾಧಿಪತಿರ್ಭವೇತ್ | ವಕ್ಷಸಾ ಧಾರಯೇಲ್ಲಿಂಗಂ ಇಂದ್ರಸ್ಯಾಧಿಪತಿರ್ಭವೇತ್ || ಕಂಠೇತು ಧಾರಯೇಲ್ಲಿಂಗಂ ಬ್ರಾಹ್ಮಣಾಧಿಪತಿರ್ಭವೇತ್ | ಅಪರೇ ಧಾರಯೇಲ್ಲಿಂಗಂ ರಾಕ್ಷಸ್ಯಾಧಿಪತಿರ್ಭವೇತ್ || ಸ್ಕಂದೇ ತು ಧಾರಯೇಲ್ಲಿಂಗಮೀಪ್ಸಿತಂ ಲಭತೇ ಧೃವಂ | ಶಿರಸಾ ಧಾರಯೇಲ್ಲಿಂಗಂ ಗಣತ್ವೇನ ಸಯುಜ್ಯತೇ | ತೇ ಸ್ಥಾನೇಷು ಧಾರಯೇಲ್ಲಿಂಗ ಸರ್ವಸಿದ್ಧಿ ಫಲಪ್ರದಂ ||'' ಇಂತೆಂದುದಾಗಿ, ಇದಕ್ಕೆ ಲೈಂಗ್ಯಪುರಾಣೇ: ``ಲಿಂಗಪ್ರಣಿತಥಾ ಲಿಂಗಂ ಶಿಖಾಯಾಂ ಧಾರಯೇತ್ಸುದೀಃ | ತದಸ್ಥಾನಾಧಿಕಂ ದಿವ್ಯಂ ಬ್ರಹ್ಮರಂಧ್ರಂ ವಿಶೇಷತಃ || ಮೂರ್ಧ್ನಿವಾ ಧಾರಯೇಲ್ಲಿಂಗಂ ನ ತಥಾ ಚ ದ್ವಿಜಯೋ ಜಯೇತ್ | ಈಶಾವಾ ನಿತ್ಯಸಂಯೋಗೋ ಪರಯೋನಿರನಿಷ್ಟಯಃ | ನಾಭೇರಧೋ ಲಿಂಗಧಾರಿ ಪಾಪೇನ ಚ ಸ ಯುಜ್ಯತೇ | ನಾಭ್ಯೋರ್ಧ್ವೇ ಲಿಂಗಧಾರೀ ಚ ಸೌಭಾಗ್ಯಜ್ಞಾನವರ್ಧನಂ ||'' ಇಂತೆಂದುದಾಗಿ, ಇದಕ್ಕೆ ಉಮಾಮಹೇಶ್ವರ ಸಂವಾದೇ: ``ಜಾತಾ ದರ್ಶನಕರ್ತಾರಃ ಶ್ರಾವಯಂತಿ ಜಗತ್ರಯಂ | ಕಕ್ಷೇ ಬ್ರಹ್ಮಾ ಕರೇ ವಿಷ್ಣುಃ ಕಂಠೇ ಮಾಹೇಶ್ವರಸ್ಸದಾ || ವ್ಯೋಮಾತೀತಸ್ತು ಶಿರಸಿ ಮುಖೇ ರುದ್ರಸ್ತು ಧಾರಯೇತ್ | ಈಶ್ವರಸ್ತ್ವಮಲೈಕ್ಯೇ ತು ಉತ್ತಮಾಂಗೇ ಸದಾಶಿವಃ | ಇತಿ ದೇವಗಣೋ ಧೃತ್ವಾ ಲಿಂಗಂತು ಯಜತೇ ಸದಾ || ನಾಭಿಂ ಚ ಹೃದಯೇ ಮೂರ್ಧ್ನಿ ಸರ್ವಾವಸ್ಥಾಸು ಸರ್ವದಾ | ತ್ರೀಲಿಂಗಧಾರಣಂ ಕುರ್ಯಾದೇವೀ ನಿತ್ಯಂ ಮಮಪ್ರಿಯಃ || ಕಾಯಸಂಬಂಧ ಲಿಂಗೇನರಹಿತಶ್ಚಾಪಿಯೋ ಭವೇತ್ | ನಿಮುಷಾರ್ಧಂ ವಿಯೋಗೇನ ವಿಶೇಷೋತ್ವಾತ್ ಕೋಭವೇತ್ || ಇಂತೆಂದುದಾಗಿ, ಇದಕ್ಕೆ ಅಥರ್ವಣವೇದೇ: ``ಓಂ ತ್ರಯೋ ದೇವಾ ಲಿಂಗಂ ಧಾರಯಂತಿ | ಋಷಯಃ ಶಿವಲಿಂಗಧಾರಯಂತಿ | ತಸ್ಮಾದ್ದೇವಲಿಂಗ ಧಾರಯಂತಿ | ಅಜಹರಿ ಲಿಂಗಂ ಧಾರಯಂತಿ | ಸುರೇಂದ್ರದೈತ್ಯಾ ಧಾರಯಂತಿ ||'' ಇಂತೆಂದುದಾಗಿ, ಇದಕ್ಕೆ ಋಗ್ವೇದೇ: ``ಸೋಮೇ ರುದ್ರಾಯುವಮೇತಾವ್ಯಸ್ಮಿ ವಿಶ್ವಾತಮಾಷುಭೇಷಾವಿದತ್ತಂ | ಅವಸ್ಯತಂ ಮುಲಚತಯಿಂ ನೋ ಅಸ್ತಿತನುಕ್ಷುಬಂಧಂ ಕ್ರುಷಮೇನೋ ಅಸ್ತಿತ್ ||'' ಇಂತೆಂದುದಾಗಿ, ಇದಕ್ಕೆ ಅಥರ್ವಣವೇದೇ: ``ಚತುರ್ವೇದಾ ಲಿಂಗ ಧಾರಯಂತಿ | ಅನಂತಾ ವೈ ವೇದಾಃ ಲಿಂಗಂ ಧಾರಯಂತಿ ||'' ಇಂತೆಂದುದು ಶ್ರುತಿ. ಇದನರಿದು ಶ್ರೀವಿಭೂತಿ ರುದ್ರಾಕ್ಷಿ ಶಿವಲಿಂಗಧಾರಣವಿಲ್ಲದ ಕರ್ಮಿಯನೆನಗೊಮ್ಮೆ ತೋರದಿರಯ್ಯ ಅಪ್ರಮಾಣಕೂಡಲಸಂಗಮದೇವಾ.