Index   ವಚನ - 337    Search  
 
ಇನ್ನು ಪಂಚಾಕ್ಷರಿಯಸ್ಥಲವೆಂತೆಂದೊಡೆ: ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ ದಕ್ಷಿಣಭಾಗದಲ್ಲಿ ಅಕಾರೋತ್ಪತ್ಯವಾಯಿತ್ತು. ಆ ಪ್ರಣವದ ವಾಮಭಾಗದಲ್ಲಿ ಉಕಾರೋತ್ಪತ್ಯವಾಯಿತ್ತು. ಆ ಪ್ರಣವದ ಪೂರ್ವಭಾಗದಲ್ಲಿ ಮಕಾರೋತ್ಪತ್ಯವಾಯಿತ್ತು ನೋಡಾ. ಇದಕ್ಕೆ ಈಶ್ವರ ಉವಾಚ: ``ಓಂಕಾರ ದಕ್ಷಿಣೇಭಾಗೇ ಅಕಾರಂ ಚಾಪಿ ಜಾಯತೇ | ಓಂಕಾರ ವಾಮಭಾಗೇ ಚ ಉಕಾರಂಚೋದ್ಭವಂ ಸದಾ || ಓಂಕಾರ ಪೂರ್ವಭಾಗೇ ಚ ಮಕಾರಂ ಚ ಸಮುದ್ಭವಂ | ಇತಿ ತ್ರಿಯಕ್ಷರಂ ದೇವಿ ಸ್ಥಾನಸ್ಥಾನೇಷು ಜಾಯತೇ ||'' ಇಂತೆಂದುದಾಗಿ, ಅಪ್ರಮಾಣ ಕೂಡಲಸಂಗಮೇವಾ.