ಐವತ್ತೆರಡು ಅಕ್ಷರಕ್ಕೆ ಈ ಪ್ರಣವವೇ
ಉತ್ಪತ್ತಿ-ಸ್ಥಿತಿ-ಲಯಸ್ಥಾನ.
ಅಜಪೆ ಗಾಯತ್ರಿ ಪ್ರಾಣಾಯಾಮನಕ್ಕೆ ಪ್ರಣವವೇ
ಉತ್ಪತ್ತಿ-ಸ್ಥಿತಿ-ಲಯಸ್ಥಾನ.
ಅನೇಕ ವೇದಾಗಮ ಶಾಸ್ತ್ರಪುರಾಣಂಗಳಿಗೆ ಪ್ರಣವವೇ
ಉತ್ಪತ್ತಿ-ಸ್ಥಿತಿ-ಲಯಸ್ಥಾನ.
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಮೊದಲಾದ
ಸಮಸ್ಥ ದೇವರ್ಕಳಿಗೆ ಪ್ರಣವವೇ
ಉತ್ಪತ್ತಿ-ಸ್ಥಿತಿ-ಲಯಸ್ಥಾನ.
ಪ್ರಣವವೇ ಪರಂಜ್ಯೋತಿ, ಪ್ರಣವವೇ ಪರಮಾನಂದ,
ಪ್ರಣವವೇ ಪರಬ್ರಹ್ಮ,
ಪ್ರಣವವೇ ಅಖಂಡ ಲೋಕಾದಿಲೋಕಕ್ಕೆ ಮೂಲಪ್ರಣವ
ಓಂ ನಮಃಶಿವಾಯ ಪ್ರಣವ.
ಓಂ ನಮಃ ಶಿವಾಯ ಪ್ರಣವ ಸಪ್ತಕೋಟಿ ಮಂತ್ರಗಳ ಸಾರ;
ಅನಂತಕೋಟಿ ವೇದಾಗಮಶಾಸ್ತ್ರಪುರಾಣಂಗಳ ಸಾರ.
ಇದಕ್ಕೆ ಈಶ್ವರ ಉವಾಚ:
``ಸಪ್ತಕೋಟಿ ಮಹಾಮಂತ್ರ ಚಿತ್ತವ್ಯಾಕುಲ ಕಾರಣಂ |
ಏಕಯೇಕಾಕ್ಷರಂ ದೇವೀ ತೂರ್ಯಾತೀತಂ ಮನೋಲಯಃ ||
ಸಪ್ತಕೋಟಿ ಮಹಾಮಂತ್ರಂ ಉಪಮಂತ್ರಂ ಸನೇಕತಾ |
ಓ ಮಿತ್ಯೇಕಾಕ್ಷರಂ ಮೂಲಂ ಇತಿ ಭೇದಂ ವರಾನನೇ ||''
ಇಂತೆಂದುದಾಗಿ,
ಇದಕ್ಕೆ ಚಿತ್ಪಿಂಡಾಗಮೇ:
``ಓಂಕಾರೇ ಬೀಜರೂಪಂ ಚ ವೃಕ್ಷಂ ವಿಶ್ವವಿಶಾಲಯೋಃ |
ಓಮಿತ್ಯೇಕಾಕ್ಷರಂ ಬ್ರಹ್ಮ ಓಂಕಾರೇ ವಿಶ್ವಮೂರ್ತಯೇ ||''
ಇಂತೆಂದುದಾಗಿ,
ಇದಕ್ಕೆ ಈಶ್ವರ ಉವಾಚ:
``ಅಕಾರೋಕಾರ ಸಂಯೋಗ ಓಂಕಾರಃ ಸ್ವರ ಉಚ್ಯತೇ |
ಓಮಿತ್ಯೇಕಾಕ್ಷರಂ ಬ್ರಹ್ಮ ವದಂತಿ ಶಿವಯೋಗಿನಃ ||''
ಇಂತೆಂದುದಾಗಿ,
ಇದಕ್ಕೆ ಮಹಾಗಮಸಾರೇ:
``ಓಂಕಾರೇ ತ್ರಿಗುಣಾತ್ಮಾ ಚ ತದರ್ಭೇತಿ ತ್ರಿಯಕ್ಷರಂ |
ಅಕಾರೇ ಚ ಉಕಾರೇ ಚ ಮಕಾರೇ ಚ ತ್ರಿಯಕ್ಷರಂ ||
ಅಕಾರಂ ನಾದರೂಪೇಣ ಉಕಾರಂ ಬಿಂದುರುಚ್ಯತೇ |
ಮಕಾರಂತು ಕಲಾಚೈವ ನಾದಬಿಂದುಕಲಾತ್ಮನೇ |
ನಾದಬಿಂದುಕಲಾಯುಕ್ತೋ ಓಂಕಾರೋ ಪರಮೇಶ್ವರಃ ||''
ಇಂತೆಂದುದಾಗಿ,
ಇದಕ್ಕೆ ಗೀತಸಾರೇ:
``ಪೃಥಿವಿಶ್ಚಾಗ್ನಿಶ್ಚ ಋಗ್ವೇದೋ ಭೂರಿತ್ಯೇವ ಪಿತಾಮಹಃ |
ಅಕಾರೇ ತು ಲಯಂ ಪ್ರಾಪ್ತೇ ಪ್ರಥಮೇ ಪ್ರಣವಾಂಶಿಕೈಃ ||
ಅಂತರಿಕ್ಷಂ ಯಜುರ್ವೇದಂ ಭುಜೋವಿಷ್ಣುಃ ಸನಾತನವಃ |
ಉಕಾರೇತು ಲಯಂ ಪ್ರಾಪ್ತೇ ದ್ವಿತಿಯೈ ಪ್ರಣವಾಂಶಿಕೇ ||
ದಿವಿ ಸೂರ್ಯಂ ಸಾಮವೇದಸ್ಸ್ಯೋರಿತ್ಯೇವ ಮಹೇಶ್ವರಃ |
ಮಕಾರೇ ತು ಲಯಂ ಪ್ರಾಪ್ತೇ ತೃತೀಯೇ ಪ್ರಣವಾಂಶಿಕೇ |
ಅಕಾರೇ ಚ ಉಕಾರೇ ಚ ಮಕಾರೇ ಚ ತ್ರಿಯಕ್ಷರಂ |
ಇದಮೇಕಂ ಸಮುತ್ಪನ್ನಂ ಓಮಿತಿ ಜ್ಯೋತಿರೂಪಕಂ ||
ಒಂಕಾರ ಪ್ರಭವಾತ್ಸರ್ವಂ ತ್ರೈಲೋಕ್ಯಂ ಸಚರಾಚರಂ |
ಓಮಿತ್ಯೇಕಾಕ್ಷರಂ ಬ್ರಹ್ಮ ಹೃತ್ಪದ್ಮೇಪಿ ವ್ಯವಸ್ಥಿತಂ |
ಸದ್ಯೋದಹತಿ ಪಾಪಾನಿ ದೀರ್ಘೋ ಮೋಕ್ಷಂ ಪ್ರಯಚ್ಛತಿ ||''
ಇಂತೆಂದುದಾಗಿ,
ಇದಕ್ಕೆ ಪ್ರಣವೋಪನಿಷತ್:
ಅಕಾರವೆಂಬ ಪ್ರಣವದಲ್ಲಿ-
``ಅಗ್ನಿಶ್ಚ ಋಗ್ವೇದೋ ಭವತಿ | ಒಂ ರುದ್ರೋ ದೇವತಾ |
ಅಕಾರೇಚ ಲಯಂ ಪ್ರಾಪ್ತೇ ಪ್ರಥಮಂ ಪ್ರಣವಾಂಶಿಕೇ ||''
ಉಕಾರವೆಂಬ ಪ್ರಣಮದಲ್ಲಿ-
``ಅಂತರಿಕ್ಷಜುರ್ವೇದಾದ್ಭವತಿ | ಓಮೀಶ್ವರೋ ದೇವತಾ |
ಉಕಾರೇ ಚ ಲಯಂ ಪ್ರಾಪ್ತೇ ದ್ವಿತೀಯಂ ಪ್ರಣವಾಂಶಿಕೇ ||''
ಮಕಾರವೆಂಬ ಪ್ರಣವದಲ್ಲಿ-
``ವಿದ್ಯೇಸ್ಸಾಮವೇದಾ ಭವತಿ | ಓಂ ಸದಾಶಿವೋ ದೇವತಾ |
ಮಕಾರೇ ಚ ಲಯಂ ಪ್ರಾಪ್ತೇ ತೃತೀಯಂ ಪ್ರಣವಾಂಶಿಕೇ ||
ಅಕಾರೇ ಚ ಉಕಾರೇ ಚ ಮಕಾರೇ ಚ ತೃತೀಯಕಂ |
ಇದಮೇಕಂ ಸಮುತ್ಪನ್ನಂ ಓಮಿತಿ ಜ್ಯೋತಿರೂಪಕಂ ||
ಓಂಕಾರಪ್ರಭವಾ ವೇದಾ ಓಂಕಾರ ಪ್ರಭವಾತ್ಸ್ವರಾಃ |
ಓಂಕಾರಪ್ರಭವಾತ್ಸರ್ವಂ ತ್ರೈಲೋಕ್ಯಂ ಸಚರಾಚರಂ ||
ಸರ್ವವ್ಯಾಪಕಮೋಂಕಾರಂ ಮಂತ್ರನ್ಯತ್ರ ನ ಭವೇತ್ |
ಪ್ರಣವಂ ಹಿ ಪರಂ ಬ್ರಹ್ಮಂ ಪ್ರಣವಂ ಪರಮಂ ಪದಂ |
ಓಂಕಾರಂ ನಾದರೂಪಂ ಚ ಓಂಕಾರಂ ಮಂತ್ರರೂಪಕಂ |
ಓಂಕಾರಂ ವ್ಯಾಪಿ ಸರ್ವತ್ರ ಓಂಕಾರಂ ಗೋಪ್ಯಮಾನನಂ ||''
ಇಂತೆಂದುದಾಗಿ,
ಇದಕ್ಕೆ ಈಶ್ವರ ಉವಾಚ:
``ಪ್ರಣಮಂ ನಕಾರರೂಪಂ ಚ | ಓಂಕಾರಂ ಮಂತ್ರರೂಪಕಂ |
ಓಂಕಾರಂ ವ್ಯಾಪಿ ಸರ್ವತ್ರ | ಪ್ರಣವಂ ಮಕಾರರೂಪಕಂ ||
ಪ್ರಣವಂ ಶಿಕಾರರೂಪಂ ಚ | ಪ್ರಣವಂ ವಕಾರರೂಪಕಂ |
ಪ್ರಣವಂ ಯಕಾರರೂಪಂ ಚ | ಪ್ರಣವಂ ಷಡಕ್ಷರಮಯಂ |
ಇತಿ ಪ್ರಣವ ವಿಜ್ಞೇಯಂ | ಗುಹ್ಯಾದ್ಗುಹ್ಯಂ ವರಾನನೇ ||''
ಇಂತೆಂದುದಾಗಿ,
ಇದಕ್ಕೆ ಯರ್ಜುವೇದೋಪನಿಷತ್:
``ಓಮಿತ್ಯೇಕಾಕ್ಷರಂ ಬ್ರಹ್ಮ ನಮಃ ಶಿವಾಯೇತ್ಯ ಜಾಯತ ||''
ಇಂತೆಂದುದಾಗಿ,
ಇದಕ್ಕೆ ಶ್ರೀರುದ್ರೇ:
``ಓಂ ನಮಃ ಶಿವಾಯ ಚ ಶಿವ ತರಾ ಯ ಚ ||''
ಇಂತೆಂದುದಾಗಿ,
ಇದಕ್ಕೆ ಅಥರ್ವಣವೇದೇ:
``ಓಂಕಾರೋಭ್ಯೋ ಜಗಕ್ಷೇತ್ರಾ | ಯಜಿತಾಂ ಪತಯೇ ನಮೋ ನಮೋ |
ಅಕಾರೇಭ್ಯೋ ಬ್ರಹ್ಮಕ್ಷೇತ್ರಾಯ | ಕ್ಷೇತ್ರಾನಾಂ ಪತಯೇ ನಮೋ ನಮೋ |
ಉಕಾರೇಭ್ಯೋ ವಿಷ್ಣುಕ್ಷೇತ್ರಾಯ | ಕ್ಷೇತ್ರಾನಾಂ ಪತಯೇ ನಮೋ ನಮೋ |
ಮಕಾರೇಭ್ಯೋ ರುದ್ರಕ್ಷೇತ್ರಾಯ | ಕ್ಷೇತ್ರಾನಾಂ ಪತಯೇ ನಮೋ ನಮೋ |
ಓಂಕಾರೇಭ್ಯೋ ಅಧ್ವಕ್ಷೇತ್ರಾಯ | ಕ್ಷೇತ್ರಾನಾಂ ಪತಯೇ ನಮೋ ನಮೋ |
ನಮಃ ಶಿವಾಯೇಭ್ಯೋ ಸರ್ವ |
ಕ್ಷೇತ್ರಾನಾಂ ಪತಯೇ ನಮೋ ನಮೋ ||''
ಇಂತೆಂದುದಾಗಿ,
ಪ್ರಣವವ ಬಲ್ಲಾತನೆ ಬ್ರಾಹ್ಮಣನು.
ಪ್ರಣವವ ಬಲ್ಲಾತನೆ ವೇದಾಧ್ಯಾಯಿ.
ಪ್ರಣವವ ಬಲ್ಲಾತನೆ ಆಗಮಿಕನು.
ಪ್ರಣವವ ಬಲ್ಲಾತನೆ ಶಾಸ್ತ್ರಿಕನು.
ಪ್ರಣವವ ಬಲ್ಲಾತನೆ ಪುರಾಣಿಕನು.
ಪ್ರಣವವ ಬಲ್ಲಾತನೆ ದಿವ್ಯಯೋಗಿ.
ಪ್ರಣವವ ಬಲ್ಲಾತನೆ ನಿಜಾನಂದಯೋಗಿ.
ಪ್ರಣವವ ಬಲ್ಲಾತನೆ ಪರಮಜ್ಞಾನಿ.
ಪ್ರಣವವ ಬಲ್ಲಾತನೆ ಪರಮಯೋಗಿ.
ಪ್ರಣವವ ಬಲ್ಲಾತನೆ ಪರಮಾನಂದಯೋಗಿ.
ಪ್ರಣವವ ಬಲ್ಲಾತನೆ ನಿಜಯೋಗಿ.
ಪ್ರಣವವ ಬಲ್ಲಾತನೆ ಶಿವಯೋಗಿ.
ಪ್ರಣವವ ಬಲ್ಲಾತನೆ ಶಿವಾನಂದಯೋಗಿ.
ಪ್ರಣವವ ಬಲ್ಲಾತನೆ ಜ್ಞಾನಯೋಗಿ.
ಪ್ರಣವವ ಬಲ್ಲಾತನೆ ಜ್ಞಾನಾನಂದಯೋಗಿ.
ಪ್ರಣವವ ಬಲ್ಲಾತನೆ ನಮ್ಮ ಅಪ್ರಮಾಣಕೂಡಲಸಂಗಮದೇವ.
Art
Manuscript
Music
Courtesy:
Transliteration
Aivatteraḍu akṣarakke ī praṇavavē
utpatti-sthiti-layasthāna.
Ajape gāyatri prāṇāyāmanakke praṇavavē
utpatti-sthiti-layasthāna.
Anēka vēdāgama śāstrapurāṇaṅgaḷige praṇavavē
utpatti-sthiti-layasthāna.
Brahma viṣṇu rudra īśvara sadāśiva modalāda
samastha dēvarkaḷige praṇavavē
utpatti-sthiti-layasthāna.
Praṇavavē paran̄jyōti, praṇavavē paramānanda,
praṇavavē parabrahma,
praṇavavē akhaṇḍa lōkādilōkakke mūlapraṇava
ōṁ namaḥśivāya praṇava.
Ōṁ namaḥ śivāya praṇava saptakōṭi mantragaḷa sāra;
anantakōṭi vēdāgamaśāstrapurāṇaṅgaḷa sāra.
Idakke īśvara uvāca:
``Saptakōṭi mahāmantra cittavyākula kāraṇaṁ |
ēkayēkākṣaraṁ dēvī tūryātītaṁ manōlayaḥ ||
saptakōṭi mahāmantraṁ upamantraṁ sanēkatā |
ō mityēkākṣaraṁ mūlaṁ iti bhēdaṁ varānanē ||''
Intendudāgi,
idakke citpiṇḍāgamē:
``Ōṅkārē bījarūpaṁ ca vr̥kṣaṁ viśvaviśālayōḥ |
ōmityēkākṣaraṁ brahma ōṅkārē viśvamūrtayē ||''
intendudāgi,
idakke īśvara uvāca:
``Akārōkāra sanyōga ōṅkāraḥ svara ucyatē |
ōmityēkākṣaraṁ brahma vadanti śivayōginaḥ ||''
intendudāgi,
idakke mahāgamasārē:
``Ōṅkārē triguṇātmā ca tadarbhēti triyakṣaraṁ |
akārē ca ukārē ca makārē ca triyakṣaraṁ ||
akāraṁ nādarūpēṇa ukāraṁ bindurucyatē |
makārantu kalācaiva nādabindukalātmanē |
nādabindukalāyuktō ōṅkārō paramēśvaraḥ ||''
intendudāgi,
idakke gītasārē:
``Pr̥thiviścāgniśca r̥gvēdō bhūrityēva pitāmahaḥ |
akārē tu layaṁ prāptē prathamē praṇavānśikaiḥ ||
antarikṣaṁ yajurvēdaṁ bhujōviṣṇuḥ sanātanavaḥ |
ukārētu layaṁ prāptē dvitiyai praṇavānśikē ||
divi sūryaṁ sāmavēdas'syōrityēva mahēśvaraḥ |
makārē tu layaṁ prāptē tr̥tīyē praṇavānśikē |
akārē ca ukārē ca makārē ca triyakṣaraṁ |
Idamēkaṁ samutpannaṁ ōmiti jyōtirūpakaṁ ||
oṅkāra prabhavātsarvaṁ trailōkyaṁ sacarācaraṁ |
ōmityēkākṣaraṁ brahma hr̥tpadmēpi vyavasthitaṁ |
sadyōdahati pāpāni dīrghō mōkṣaṁ prayacchati ||''
intendudāgi,
idakke praṇavōpaniṣat:
Akāravemba praṇavadalli-
``agniśca r̥gvēdō bhavati | oṁ rudrō dēvatā |
akārēca layaṁ prāptē prathamaṁ praṇavānśikē ||''
ukāravemba praṇamadalli-
``antarikṣajurvēdādbhavati | ōmīśvarō dēvatā |
ukārē ca layaṁ prāptē dvitīyaṁ praṇavānśikē ||''
makāravemba praṇavadalli-
``vidyēs'sāmavēdā bhavati | ōṁ sadāśivō dēvatā |
makārē ca layaṁ prāptē tr̥tīyaṁ praṇavānśikē ||
akārē ca ukārē ca makārē ca tr̥tīyakaṁ |
Idamēkaṁ samutpannaṁ ōmiti jyōtirūpakaṁ ||
ōṅkāraprabhavā vēdā ōṅkāra prabhavātsvarāḥ |
ōṅkāraprabhavātsarvaṁ trailōkyaṁ sacarācaraṁ ||
sarvavyāpakamōṅkāraṁ mantran'yatra na bhavēt |
praṇavaṁ hi paraṁ brahmaṁ praṇavaṁ paramaṁ padaṁ |
ōṅkāraṁ nādarūpaṁ ca ōṅkāraṁ mantrarūpakaṁ |
ōṅkāraṁ vyāpi sarvatra ōṅkāraṁ gōpyamānanaṁ ||''
intendudāgi,
Idakke īśvara uvāca:
``Praṇamaṁ nakārarūpaṁ ca | ōṅkāraṁ mantrarūpakaṁ |
ōṅkāraṁ vyāpi sarvatra | praṇavaṁ makārarūpakaṁ ||
praṇavaṁ śikārarūpaṁ ca | praṇavaṁ vakārarūpakaṁ |
praṇavaṁ yakārarūpaṁ ca | praṇavaṁ ṣaḍakṣaramayaṁ |
iti praṇava vijñēyaṁ | guhyādguhyaṁ varānanē ||''
intendudāgi,
idakke yarjuvēdōpaniṣat:
``Ōmityēkākṣaraṁ brahma namaḥ śivāyētya jāyata ||''
intendudāgi,
idakke śrīrudrē:
``Ōṁ namaḥ śivāya ca śiva tarā ya ca ||''
intendudāgi,
idakke atharvaṇavēdē:
``Ōṅkārōbhyō jagakṣētrā | yajitāṁ patayē namō namō |
akārēbhyō brahmakṣētrāya | kṣētrānāṁ patayē namō namō |
Ukārēbhyō viṣṇukṣētrāya | kṣētrānāṁ patayē namō namō |
makārēbhyō rudrakṣētrāya | kṣētrānāṁ patayē namō namō |
ōṅkārēbhyō adhvakṣētrāya | kṣētrānāṁ patayē namō namō |
namaḥ śivāyēbhyō sarva |
kṣētrānāṁ patayē namō namō ||''
intendudāgi,
Praṇavava ballātane brāhmaṇanu.
Praṇavava ballātane vēdādhyāyi.
Praṇavava ballātane āgamikanu.
Praṇavava ballātane śāstrikanu.
Praṇavava ballātane purāṇikanu.
Praṇavava ballātane divyayōgi.
Praṇavava ballātane nijānandayōgi.
Praṇavava ballātane paramajñāni.
Praṇavava ballātane paramayōgi.
Praṇavava ballātane paramānandayōgi.
Praṇavava ballātane nijayōgi.
Praṇavava ballātane śivayōgi.
Praṇavava ballātane śivānandayōgi.
Praṇavava ballātane jñānayōgi.
Praṇavava ballātane jñānānandayōgi.
Praṇavava ballātane nam'ma apramāṇakūḍalasaṅgamadēva.