Index   ವಚನ - 345    Search  
 
ಭಾವಲಿಂಗದಲ್ಲಿ ಪ್ರಾಜ್ಞಾತ್ಮನೆಂಬ ಯೋಗಾಂಗವೈಕ್ಯವಾಯಿತ್ತು. ಪ್ರಾಣಲಿಂಗದಲ್ಲಿ ತೈಜಸಾತ್ಮವೆಂಬ ಭೋಗಾಂಗವೈಕ್ಯವಾಯಿತ್ತು. ಇಷ್ಟಲಿಂಗದಲ್ಲಿ ವಿಶ್ವಾತ್ಮವೆಂಬ ತ್ಯಾಗಾಂಗವೈಕ್ಯವಾಯಿತ್ತು. ಇದಕ್ಕೆ ಶ್ರೀ ಮಹಾದೇವ ಉವಾಚ: ``ಅಂಗಂ ತ್ವಂ ಪದಮಾಖ್ಯಾತಂ ಲಿಂಗಂ ತತ್ಪದಮೇವ ಚ | ಅನಯೋರೈಕ್ಯಬಾಹೋಯಂ ಸಂಬಂಧೋsಸಿಪದಾವಪಿ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.