Index   ವಚನ - 363    Search  
 
ಇನ್ನು ಪ್ರಥಮಲಿಂಗ ದ್ವಿತೀಯಲಿಂಗ ತೃತೀಯಲಿಂಗದಲ್ಲಿ ಸಮುದ್ಭವವಾದ, ಪ್ರಥಮ ದ್ವಿತೀಯ ತೃತೀಯ ಪ್ರಸಾದದ ವಿವರ ಅದೆಂತೆಂದಡೆ: ಪ್ರಥಮಲಿಂಗದಲ್ಲಿ ಶುದ್ಧ, ದ್ವಿತೀಯಲಿಂಗದಲ್ಲಿ ಸಿದ್ಧ, ತೃತೀಯಲಿಂಗದಲ್ಲಿ ಪ್ರಸಿದ್ಧ. ಶುದ್ಧ ಗುರುಪ್ರಸಾದ, ಸಿದ್ಧ ಲಿಂಗಪ್ರಸಾದ, ಪ್ರಸಿದ್ಧ ಜಂಗಮಪ್ರಸಾದ, ಶಿವಜ್ಞಾನವೇ ಮಹಾಪ್ರಸಾದ-ಇಂತು ಚತುರ್ವಿಧ ಪ್ರಸಾದ ನೋಡಾ ಅಪ್ರಮಾಣಕೂಡಲಸಂಗಮದೇವಾ.