Index   ವಚನ - 1026    Search  
 
ಕಂಗಳ ಮುಂದಣ ಗೊತ್ತನರಿದು, ಕಾಮ್ಯದ ಮುಂದಣ ಚಿತ್ತವ ಹರಿದು, ಮಾಡಿಹೆನೆಂಬ ಮಾಟಕೂಟದ ಚಿತ್ತ ನಿಂದಲ್ಲದೆ ಸ್ವಸ್ಥವಿಲ್ಲ. ಹಾಂಗಲ್ಲದೆ ಗುಹೇಶ್ವರಲಿಂಗವ ಕಾಣಬಾರದು ಆಯ್ದಕ್ಕಿಯ ಮಾರಯ್ಯಾ.