Index   ವಚನ - 372    Search  
 
ಮತ್ತಂ, ಆ ಶಿಷ್ಯನು ಸದ್ಗುರುಸ್ವಾಮಿಗೆ ದೀರ್ಘದಂಡ ನಮಸ್ಕಾರವಂ ಮಾಡಿ ಭಯ ಭಕ್ತಿಯಿಂದ `ಎಲೆ ಸದ್ಗುರುಸ್ವಾಮಿ ಆದಿಮೂಲ ಆನಾದಿಮೂಲಂಗಳಿಗತ್ತತ್ತವಾಗಿಹ ಚಿದ್ಬ್ರಹ್ಮಾಂಡ ಮೊದಲಾಗಿ ಪ್ರಣವಬ್ರಹ್ಮಾಂಡ ಕಡೆಯಾಗಿ ಅನಂತಕೋಟಿ ಬ್ರಹ್ಮಾಂಡಗಳೇನೂ ಇಲ್ಲದಂದು, ಇನ್ನೂರಿಪ್ಪತ್ನಾಲ್ಕು ಭುವನಂಗಳು ಮೊದಲಾಗಿ ಮಹಾಭುವನ, ಅತಿಮಹಾಭುವನಂಗಳು ಕಡೆಯಾಗಿ, ಅತಿಮಹಾತೀತ ಮಹಾ ಅನಂತಕೋಟಿ ಭುವನಾದಿಭುವನಂಗಳೇನೂ ಎನಲಿಲ್ಲದಂದು, ಆದಿಮೂಲ ಆನಾದಿಮೂಲಂಗಳಿಗತ್ತತ್ತವಾದ ಮಹಾಮೂಲಸ್ವಾಮಿಯ ಮೀರಿದ ಅತಿಮಹಾಮೂಲ ಸ್ವಾಮಿಗತ್ತತ್ತವಾಗಿಹ ಅಖಂಡಮಹಾಮೂಲಸ್ವಾಮಿಯ ರೂಪು-ಲಾವಣ್ಯ-ಸೌಂದರ್ಯ-ಅಂಗ-ಪ್ರತ್ಯಂಗ -ಸ್ವರೂಪ-ಸ್ವಭಾವಂಗಳು ಹೇಗಿರ್ದವೆಂಬುದನು, ನಿರಂಜನಾತೀತ ಪ್ರಣವದುತ್ಪತ್ಯವನು, ಅವಾಚ್ಯ ಪ್ರಣವದುತ್ಪತ್ಯವನು ಕಲಾಪ್ರಣವದುತ್ಪತ್ಯದ ಭೇದವನು, ಅನಾದಿಪ್ರಣವದುತ್ಪತ್ಯದ ಭೇದವನು, ಅನಾದಿ ಅಕಾರ ಉಕಾರ ಮಕಾರದುತ್ಪತ್ಯವನು, ಆದಿಪ್ರಣವದುತ್ಪತ್ಯದ ಭೇದವನು, ಆದಿ ಅಕಾರ ಉಕಾರ ಮಕಾರಂಗಳುತ್ಪತ್ಯವನು, ನಾದ ಬಿಂದುಕಳೆಗಳ ಭೇದವನು, ಆ ಆದಿ ಅಕಾರ ಉಕಾರ ಮಕಾರದಲ್ಲಿ ತಾರಕಸ್ವರೂಪ ದಂಡಕಸ್ವರೂಪ ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ ಜ್ಯೋತಿಸ್ವರೂಪದುತ್ಪತ್ಯ ಲಯದ ಭೇದವನು, ಅದಕ್ಕೆ ಅಧಿದೇವತೆಯನು, ತಾರಕಸ್ವರೂಪ ದಂಡಕಸ್ವರೂಪ ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ ಜ್ಯೋತಿಸ್ವರೂಪವು ಅಕಾರ ಉಕಾರ ಮಕಾರದಲ್ಲಿ ಅಡಗಿದ ಭೇದವನು, ಅಕಾರ-ಉಕಾರ-ಮಕಾರ-ನಾದ-ಬಿಂದು-ಕಳೆ-ಪ್ರಕೃತಿ-ಪ್ರಾಣ ಆಧಾರಂಗಳ ಭೇದವನು, ನಾದಬಿಂದುಕಳೆ ಪ್ರಕೃತಿ ಪ್ರಾಣಂಗಳ ಆಧಾರಂಗಳ ಭೇದವನು, ನಾದ-ಬಿಂದು-ಕಳೆ-ಅಕಾರ-ಉಕಾರ-ಮಕಾರವು ಕೂಡಿ ಓಂಕಾರದುತ್ಪತ್ಯವನು, ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದುತ್ಪತ್ಯದ ಭೇದವನು, ಅಖಂಡ ಸ್ವಯಂಭುಲಿಂಗದುತ್ಪತ್ಯವನು, ಅನಾದಿ ಸದಾಶಿವದುತ್ಪತ್ಯದ ಭೇದವನು, ಅನಾದಿ ಈಶ್ವರತತ್ತ್ವದುತ್ಪತ್ಯವನು, ಅನಾದಿ ಮಹೇಶ್ವರತತ್ತ್ವದುತ್ಪತ್ಯದ ಭೇದವನು, ಆದಿ ಸದಾಶಿವತತ್ತ್ವದುತ್ಪತ್ಯದ ಭೇದವನು, ಆದಿ ಈಶ್ವರತತ್ತ್ವದುತ್ಪತ್ಯದ ಭೇದವನು, ಆದಿ ಮಹೇಶ್ವರತತ್ತ್ವದುತ್ಪತ್ಯದ ಭೇದವನು, ದಶಚಕ್ರದ ಉತ್ಪತ್ಯಭೇದವನು, ದಶಚಕ್ರದ ನ್ಯಾಸವನು, ದಶಚಕ್ರದ ನಿವೃತ್ತಿಯನು, ನವಪದ್ಮದ ನಿವೃತ್ತಿಯನು, ನವಪದ್ಮದ ನೆಲೆಯನು, ನವಪದ್ಮದ ನಿವೃತ್ತಿಯನು, ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ ತಾರಕಸ್ವರೂಪ ಕುಂಡಲಾಕಾರ ಜ್ಯೋತಿಸ್ವರೂಪದಲ್ಲಿ ಅಕಾರ ಉಕಾರ ಮಕಾರದುತ್ಪತ್ಯವನು, ಆ ಅಕಾರ ಉಕಾರ ಮಕಾರದಲ್ಲಿ ಪೃಥ್ವಿ ಅಗ್ನಿ ಋಗ್ವೇದ ಭೂಲೋಕ ಬ್ರಹ್ಮಾಂಡ ಅಂತರೀಕ್ಷ ಯಜುರ್ವೇದ ವಾಯು ಭುವರ್ಲೋಕ, ವಿಷ್ಣು ದಿವಿ ಸೂರ್ಯ ಸಾಮವೇದ ಸ್ವರ್ಗಲೋಕ ಮಹೇಶ್ವರನುತ್ಪತ್ಯ ಲಯವನು, ಆ ಅಕಾರ ಉಕಾರ ಮಕಾರ ಸಂಯುಕ್ತವಾಗಿ ಓಂಕಾರ ಉತ್ಪತ್ಯವಾದ ಭೇದವನು, ಆ ಓಂಕಾರ ತಾರಕಸ್ವರೂಪ ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ ಜ್ಯೋತಿಸ್ವರೂಪದ ಕಾಂತಿಯನು, ಅತಿಸೂಕ್ಷ್ಮ ಪಂಚಾಕ್ಷರಿಯ ಉತ್ಪತ್ಯವನು, ಅತಿಸೂಕ್ಷ್ಮ ಪಂಚಾಕ್ಷರಿಯ ನೆಲೆಯನು, ಅತಿಸೂಕ್ಷ್ಮ ಪಂಚಾಕ್ಷರಿಯ ನಿವೃತ್ತಿಯನು, ಅತಿಸೂಕ್ಷ್ಮ ಪಂಚಾಕ್ಷರಿಯ ಕಾಂತಿಯನು, ಚಿದಾತ್ಮ ಪರಮಾತ್ಮನುತ್ಪತ್ಯವನು, ಚಿದಾತ್ಮ ಪರಮಾತ್ಮನ ನೆಲೆಯನು, ಚಿದಾತ್ಮ ಪರಮಾತ್ಮನ ನಿವೃತ್ತಿಯನು, ಏಕಾಕ್ಷರದುತ್ಪತ್ಯವನು, ತ್ರಿಯಾಕ್ಷರದುತ್ಪತ್ಯವನು, ಸಹಸ್ರಾಕ್ಷರದುತ್ಪತ್ಯವನು, ಏಕಾಕ್ಷರದ ನೆಲೆಯನು, ತ್ರಿಯಾಕ್ಷರದ ನೆಲೆಯನು, ಸಹಸ್ರಾಕ್ಷರದ ನೆಲೆಯನು, ಏಕಾಕ್ಷರದ ನಿವೃತ್ತಿಯನು, ತ್ರಿಯಾಕ್ಷರದ ನಿವೃತ್ತಿಯನು, ಸಹಸ್ರಾಕ್ಷರದ ನಿವೃತ್ತಿಯನು, ಷಡ್ವಿಧಮುಖಂಗಳುತ್ಪತ್ಯವನು, ಷಡ್ವಿಧಮುಖಂಗಳ ನೆಲೆಯನು, ಷಡ್ವಿಧಮುಖಂಗಳ ನಿವೃತ್ತಿಯನು, ಷಡ್ವಿಧಭೂತಂಗಳುತ್ಪತ್ಯವನು, ಷಡ್ವಿಧಭೂತಂಗಳ ನೆಲೆಯನು, ಷಡ್ವಿಧಭೂತಂಗಳ ನಿವೃತ್ತಿಯನು, ಷಡ್ವಿಧಲಿಂಗದುತ್ಪತ್ಯವನು, ಷಡ್ವಿಧಲಿಂಗಗಳ ನೆಲೆಯನು, ಷಡ್ವಿಧಲಿಂಗಗಳ ನಿವೃತ್ತಿಯನು, ಷಡ್ವಿಧಕಲೆಗಳುತ್ಪತ್ಯವನು, ಷಡ್ವಿಧಕಲೆಗಳ ನೆಲೆಯನು, ಷಡ್ವಿಧಕಲೆಗಳ ನಿವೃತ್ತಿಯನು, ಷಡ್ವಿಧಸಾದಾಖ್ಯದುತ್ಪತ್ಯವನು, ಷಡ್ವಿಧಸಾದಾಖ್ಯದ ನೆಲೆಯನು, ಷಡ್ವಿಧಸಾದಾಖ್ಯದ ನಿವೃತ್ತಿಯನು, ಷಡ್ವಿಧಹಸ್ತಂಗಳುತ್ಪತ್ಯವನು, ಷಡ್ವಿಧಹಸ್ತಂಗಳ ನೆಲೆಯನು, ಷಡ್ವಿಧಹಸ್ತಂಗಳ ನಿವೃತ್ತಿಯನು, ನವಶಕ್ತಿಯ ಉತ್ಪತ್ಯವನು, ನವಶಕ್ತಿಯ ನೆಲೆಯನು, ನವಶಕ್ತಿಯ ನಿವೃತ್ತಿಯನು, ನವ ಅಧಿದೇವತೆಗಳುತ್ಪತ್ಯವನು, ನವ ಅಧಿದೇವತೆಗಳ ನೆಲೆಯನು, ನವ ಅಧಿದೇವತೆಗಳ ನಿವೃತ್ತಿಯನು, ಅಷ್ಟನಾದದುತ್ಪತ್ಯವನು, ಅಷ್ಟನಾದದ ನೆಲೆಯನು, ಅಷ್ಟನಾದದ ನಿವೃತ್ತಿಯನು, ಷಡ್ವಿಧಭಕ್ತಿಯ ಉತ್ಪತ್ಯವನು, ಷಡ್ವಿಧಭಕ್ತಿಯ ನೆಲೆಯನು, ಷಡ್ವಿಧಭಕ್ತಿಯ ನಿವೃತ್ತಿಯನು, ಷಡ್ವಿಧಪರಿಣಾಮದುತ್ಪತ್ಯವನು, ಷಡ್ವಿಧಪರಿಣಾಮದ ನೆಲೆಯನು, ಷಡ್ವಿದ ಪರಿಣಾಮದ ನಿವೃತ್ತಿಯನು, ಚತುರ್ವೇದದುತ್ಪತ್ಯವನು, ಚತುರ್ವೇದದ ನೆಲೆಯನು, ಚತುರ್ವೇದದ ನಿವೃತ್ತಿಯನು, ಅಜಪೆ ಗಾಯತ್ರಿ ಉತ್ಪತ್ಯವನು, ಅಜಪೆ ಗಾಯತ್ರಿ ನೆಲೆಯನು, ಅಜಪೆ ಗಾಯತ್ರಿಯ ನಿವೃತ್ತಿಯನು, ಷಡ್ವಿಧ ಚಕ್ರಾರ್ಪಣದ ಭೇದವನು, ಮಿಶ್ರಾರ್ಪಣ ಷಡುಸ್ಥಲ ಭೇದವನು, ಇಷ್ಟ-ಪ್ರಾಣ-ಭಾವಲಿಂಗದ ಭೇದವನು, ಇಷ್ಟ-ಪ್ರಾಣ-ಭಾವಲಿಂಗದಲ್ಲಿ ತಾರಕಸ್ವರೂಪ ದಂಡಕಸ್ವರೂಪ ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ ಜ್ಯೋತಿಸ್ವರೂಪವು ಅಡಗಿಹ ಭೇದವನು ಅಕಾರ ಉಕಾರ ಮಕಾರ ಈ ಮೂರು ಕೂಡಿ ಏಕಾರ್ಥವಾಗಿ ಅಖಂಡಜ್ಯೋತಿರ್ಮಯಲಿಂಗವಾದ ಭೇದವನು. ಆತ್ಮನುತ್ಪತ್ಯವನು, ಆತ್ಮನ ನೆಲೆಯನು, ಆತ್ಮನ ನಿವೃತ್ತಿಯನು, ಪೃಥ್ವಿ ಅಪ್ಪು ತೇಜ ವಾಯು ಆಕಾಶದ ನೆಲೆಯನು, ಪೃಥ್ವಿ ಅಪ್ಪು ತೇಜ ವಾಯು ಆಕಾಶದ ನಿವೃತ್ತಿಯನು, ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನುತ್ಪತ್ಯವನು, ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನ ನೆಲೆಯನು, ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನ ನಿವೃತ್ತಿಯನು, ಷಡ್ವಿಧ ಅರ್ಪಿತ ಅವಧಾನದ ಭೇದವನು, ನಿರಾಳ ದಶಚಕ್ರಂಗಳ ಭೇದವನು, ನಿರಾಮಯ ಷಟ್ಸ್ಥಲದ ಭೇದವನು, ನಿರಂಜನ ದಶಚಕ್ರಂಗಳ ಭೇದವನು, ನಿರಾಮಯಾತೀತ ಷಟ್ಸ್ಥಲದ ಭೇದವನು, ಷಟ್ಸ್ಥಲ ಬ್ರಹ್ಮದುತ್ಪತ್ಯವನು, ಆ ಷಟ್ಸ್ಥಲಬ್ರಹ್ಮದಲ್ಲಿ ಮೂವತ್ತಾರು ತತ್ತ್ವಂಗಳುತ್ಪತ್ಯವನು, ಷಡುಶಕ್ತಿಗಳುತ್ಪತ್ಯವನು, ಷಡಂಗಂಗಳುತ್ಪತ್ಯವನು, ಶಿವಶಕ್ತಿಗಳುತ್ಪತ್ಯವನು, ಪ್ರೇರಕಾವಸ್ಥೆಯ ದರ್ಶನದ ಭೇದವನು, ಮಧ್ಯಾವಸ್ಥೆಯ ದರ್ಶನದ ಭೇದವನು, ಕೆಳಗಾದವಸ್ಥೆಯ ದರ್ಶನವನು, ಮೇಲಾದವಸ್ಥೆಯ ದರ್ಶನದ ಭೇದವನು, ಕೇವಲಾವಸ್ಥೆಯ ದರ್ಶನವನು, ಸಕಲಾವಸ್ಥೆಯ ದರ್ಶನದ ಭೇದವನು, ಶುದ್ಧಾವಸ್ಥೆಯ ದರ್ಶನದ ಭೇದವನು, ಪಂಚಮಲಂಗಳ ದರ್ಶನವನು, ನಿರ್ಮಲಾವಸ್ಥೆಯ ದರ್ಶನದ ಭೇದವನು, ನಿರಾಳವಸ್ಥೆಯ ದರ್ಶನವನು, ನಿರಂಜನಾವಸ್ಥೆಯ ದರ್ಶನದ ಭೇದವನು, ಜ್ಞಾನವಸ್ಥೆಯ ದರ್ಶನವನು, ಶಿವಾವಸ್ಥೆಯ ದರ್ಶನದ ಭೇದವನು, ಮಂತ್ರಾಧ್ವದುತ್ಪತ್ಯವನು, ಮಂತ್ರಾಧ್ವದ ವರ್ತನೆಯನು, ಪದಾಧ್ವದುತ್ಪತ್ಯವನು, ಪದಾಧ್ವದ ವರ್ತನೆಯನು, ವರ್ಣಾಧ್ವದುತ್ಪತ್ಯವನು, ವರ್ಣಾಧ್ವದ ವರ್ತನೆಯನು, ಭುವನಾಧ್ವದುತ್ಪತ್ಯವನು, ಭುವನಾಧ್ವದ ವರ್ತನೆಯನು, ತತ್ತ್ವಾಧ್ವದುತ್ಪತ್ಯವನು, ತತ್ವಾಧ್ವದ ವರ್ತನೆಯನು, ಕಲಾಧ್ವದುತ್ಪತ್ಯವನು, ಕಲಾಧ್ವದ ವರ್ತನೆಯನು, ಗುರುಲಿಂಗಜಂಗಮವೆಂದು ಸುಳಿವ ಅಣ್ಣಗಳ, ತಾಮಸನಿರಸನವ ಮಾಡಿ ನುಡಿದ ವಚನದ ಭೇದವನು, ತತ್ಪದ ತ್ವಂಪದ ಅಸಿಪದಂಗಳ ಭೇದವನು, ಆ ತ್ವಂಪದ ತತ್ಪದ ಅಕಾರ ಉಕಾರ ಮಕಾರಂಗಳಲ್ಲಿ ಅಡಗಿಹ ಭೇದವನು, ಆ ಆಕಾರ ಉಕಾರ ಮಕಾರ ಏಕವಾಗಿ ಷಟ್ಸ್ಥಲಬ್ರಹ್ಮವಾದ ಭೇದವನು, ವಚನಾನುಭಾವದ ಭೇದವನು ಅರಿಯೆನು, ಎಲೆ ಸದ್ಗುರುಸ್ವಾಮಿ ನಿರೂಪಿಸೆಂದು, ಆ ಶಿಷ್ಯನು ಬಿನ್ನವಿಸಲು ಆ ಸದ್ಗುರುಸ್ವಾಮಿ ನಿರೂಪಿಸಿದ ವಚನವೆಂತೆಂದಡೆ: ಅನಂತಕೋಟಿ ಮಹಾಬ್ರಹ್ಮಾಂಡ ಮೊದಲಾಗಿ ಅನಂತಕೋಟಿ ಪ್ರಣವಬ್ರಹ್ಮಾಂಡ ಕಡೆಯಾಗಿ ಅನಂತಕೋಟಿ ಅತಿಮಹಾಬ್ರಹ್ಮಾಂಡಂಗ- ಳೇನೂಯೇನೂ ಎನಲಿಲ್ಲದಂದು, ಅನಂತಕೋಟಿ ಮಹಾಬ್ರಹ್ಮಾಂಡಂಗಳನ