Index   ವಚನ - 391    Search  
 
ಏನು ಏನೂ ಎನಲಿಲ್ಲದ ಮಹಾಘನ ಚಿತ್ಕಲಾಪ್ರಣವದ ನೆನಹುಮಾತ್ರದಲ್ಲಿ ಅನಾದಿಪ್ರಣವದ ಉತ್ಪತ್ಯವಾಯಿತ್ತು. ಆ ಅನಾದಿಪ್ರಣವಸ್ಥಲದ ವಚನವೆಂತೆಂದಡೆ: ಆದಿ ಅಕಾರ ಆದಿ ಉಕಾರ ಆದಿ ಮಕಾರವೆಂಬ ಆದಿ ಅಕ್ಷರತ್ರಯಂಗಳಿಲ್ಲದಂದು. ಆದಿ ನಾದ ಆದಿ ಬಿಂದು ಆದಿ ಕಲೆಗಳೆಂಬ ಭಿನ್ನನಾಮ ತಲೆದೋರದಂದು, ಆದಿ ಪ್ರಕೃತಿ ಆದಿ ಪ್ರಾಣವಿಲ್ಲದಂದು, ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವ ಜ್ಯೋತಿರ್ಲಿಂಗವಿಲ್ಲದಂದು, ಓಂಕಾರವೆಂಬ ಅನಾದಿಪ್ರಣವವಾಗಿದ್ದನು ನೋಡಾ ಇಲ್ಲದಂತೆ, ನಮ್ಮ ಅಪ್ರಮಾಣಕೂಡಸಂಗಮದೇವನು