Index   ವಚನ - 399    Search  
 
ಆ ಆದಿ ಪ್ರಣವದ ನೆನಹುಮಾತ್ರದಲ್ಲಿ ಆದಿ ಅಕಾರ, ಆದಿ ಉಕಾರ, ಆದಿ ಮಕಾರವೆಂಬ ಪ್ರಣವತ್ರಯಂಗಳುತ್ಪತ್ಯವಾಯಿತ್ತು. ಆ ಆದಿ ಅಕಾರ, ಆದಿ ಉಕಾರ, ಆದಿ ಮಕಾರ- ಇವು ಮೂರು ಬೀಜಾಕ್ಷರ. ಆದಿ ಅಕಾರವೆ ಆದಿನಾದ, ಆದಿ ಉಕಾರವೇ ಆದಿಬಿಂದು, ಆದಿ ಮಕಾರವೆ ಆದಿಕಲೆ. ಆದಿ ಅಕಾರವೇ ನಿರಾಳಾತ್ಮನು, ಆದಿ ಉಕಾರವೇ ನಿರಂಜನಾತ್ಮನು, ಆದಿ ಮಕಾರವೆ ನಿರಾಮಯಾತ್ಮಕನು ನೋಡಾ. ಇದಕ್ಕೆ ಶ್ರೀಮಹಾದೇವೋವಾಚ: ಅಕಾರಂ ನಾದರೂಪೇಣ ಉಕಾರೋ ಬಿಂದುರುಚ್ಯತೇ | ಮಕಾರಂತು ಕಲಾಶ್ಚೈವ ನಾದಬಿಂದುಕಲಾತ್ಮನೇ || ಓಂಕಾರೋ ಜ್ಯೋತಿರೂಪಂಚ ಓಂಕಾರೋ ಪರಮೇಶ್ವರಃ | ನಾದರೂಪಂ ನಿರಾಲಂಬಂ ಬಿಂದುರೂಪಂ ನಿರಂಜನಂ | ನಾದಬಿಂದೂಭಯೋಃ ಕರ್ತಾ ರುದ್ರಃ ಶಂಭುಃ ನಿರಾಮಯಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.