ಪರಾಪರವಾಗಿಹ ಪರಬ್ರಹ್ಮದ ನೆನಹುಮಾತ್ರದಲ್ಲಿ
`ಮಹಾಕ್ಷಿತಿದಳಪದ್ಮಾವುದ್ಭವತಿ | ಓಂ ಪರಾಪರಾತ್ಮೋ ದೇವತಾ |'
ಎಂದುದಾಗಿ,
ಆ ಪರಾಪರಕ್ಕೂ ಪರವಾಗಿಹ
ಪರಬ್ರಹ್ಮದ ನೆನಹುಮಾತ್ರದಲ್ಲಿಯೇ
ಮಹಾಕ್ಷಿತಿದಳ ಪದ್ಮವುದ್ಭವಿಸಿ,
ಪರಶಿವಚಕ್ರಮಂ ಮುಟ್ಟಿ
ಅನಂತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Parāparavāgiha parabrahmada nenahumātradalli
`mahākṣitidaḷapadmāvudbhavati | ōṁ parāparātmō dēvatā |'
endudāgi,
ā parāparakkū paravāgiha
parabrahmada nenahumātradalliyē
mahākṣitidaḷa padmavudbhavisi,
paraśivacakramaṁ muṭṭi
anantakōṭi sūryacandrāgni prakāśavāgihudu nōḍā
apramāṇakūḍalasaṅgamadēvā