ಇನ್ನು ಆ ಅಖಂಡಜ್ಯೋತಿರ್ಮಯವಾಗಿ
ಗೋಳಕಾಕಾರ ಪ್ರಣವದ ತಾರಕಸ್ವರೂಪದಲ್ಲಿ
ಅಕಾರ ಉತ್ಪತ್ಯವಾಯಿತ್ತು.
ಆ ಪ್ರಣಮದ ಕುಂಡಲಾಕಾರದಲ್ಲಿ
ಉಕಾರ ಉತ್ಪತ್ಯವಾಯಿತ್ತು.
ಆ ಪ್ರಣವದ ಜ್ಯೋತಿಸ್ವರೂಪದಲ್ಲಿ
ಮಕಾರ ಉತ್ಪತ್ಯವಾಯಿತ್ತು ನೋಡಾ.
ಇದಕ್ಕೆ ಚಕ್ರಾತೀತಾಗಮೇ:
ಓಂಕಾರ ತಾರಕಾರೂಪೇ ಅಕಾರಂ ಚ ಪ್ರಜಾಯತೇ |
ಓಂಕಾರ ಕುಂಡಲಾಕಾರೇ ಉಕಾರಂ ಚ ಪ್ರಜಾಯತೇ ||
ಓಂಕಾರ ಜ್ಯೋತಿರೂಪೇ ಚ ಮಕಾರಂ ಚಾಪಿ ಜಾಯತೇ |
ಇತ್ಯಕ್ಷರತ್ರಯಂ ದೇವಿ ಸ್ಥಾನಸ್ಥಾನೇಷು ಜಾಯತೇ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu ā akhaṇḍajyōtirmayavāgi
gōḷakākāra praṇavada tārakasvarūpadalli
akāra utpatyavāyittu.
Ā praṇamada kuṇḍalākāradalli
ukāra utpatyavāyittu.
Ā praṇavada jyōtisvarūpadalli
makāra utpatyavāyittu nōḍā.
Idakke cakrātītāgamē:
Ōṅkāra tārakārūpē akāraṁ ca prajāyatē |
ōṅkāra kuṇḍalākārē ukāraṁ ca prajāyatē ||
ōṅkāra jyōtirūpē ca makāraṁ cāpi jāyatē |
ityakṣaratrayaṁ dēvi sthānasthānēṣu jāyatē ||''
intendudāgi,
apramāṇakūḍalasaṅgamadēvā.