Index   ವಚನ - 452    Search  
 
ಇನ್ನು ಐವತ್ತೆರಡಕ್ಷರದ ಉತ್ಪತ್ಯವದೆಂತೆಂದಡೆ: ಆ ಪ್ರಣವದ ತಾರಕಸ್ವರೂಪದಲ್ಲಿಹ ನಕಾರದಲ್ಲಿ ನಕಾರ ಉತ್ಪತ್ಯವಾಯಿತ್ತು. ಆ ಪ್ರಣವದ ಕುಂಡಲಾಕಾರದಲ್ಲಿಹ ಮಕಾರದಲ್ಲಿ ಮಕಾರ ಉತ್ಪತ್ಯವಾಯಿತ್ತು. ಆ ಪ್ರಣವದ ದಂಡಕಸ್ವರೂಪದಲ್ಲಿಹ ಶಿಕಾರದಲ್ಲಿ ಶಿಕಾರ ಉತ್ಪತ್ಯವಾಯಿತ್ತು. ಆ ಪ್ರಣವದ ಅರ್ಧಚಂದ್ರಕದಲ್ಲಿಹ ವಕಾರದಲ್ಲಿ ವಕಾರ ಉತ್ಪತ್ಯವಾಯಿತ್ತು. ಆ ಪ್ರಣವದ ದರ್ಪಣಾಕಾರದಲ್ಲಿಹ ಯಕಾರದಲ್ಲಿ ಯಕಾರ ಉತ್ಪತ್ಯವಾಯಿತ್ತು ನೋಡಾ. ಇದಕ್ಕೆ ನೀಲಕಂಠಸಾರೇ: ನಕಾರೇ ನಕಾರೋತ್ಪನ್ನಂ ಮಕಾರೇ ಮಕಾರಮುದ್ಭವಂ | ಶಿಕಾರೇ ಶಿಕಾರಮುತ್ಪನ್ನಂ ವಕಾರೇ ವಕಾರಮುದ್ಭವಂ | ಯಕಾರೇ ಯಕಾರಮುತ್ಪನ್ನಂ ಗುಹ್ಯಾದ್ಗುಹ್ಯಂ ಕಮಲಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.