ಇನ್ನು ಷಡ್ವಿಧಲಿಂಗದ ನೆಲೆ ಅದೆಂತೆಂದಡೆ:
ಆಧಾರಚಕ್ರದಲ್ಲಿ ನಾದಸ್ವರೂಪವಾಗಿ ಆಚಾರಲಿಂಗವಿಹುದು.
ಸ್ವಾಧಿಷ್ಠಾನಚಕ್ರದಲ್ಲಿ ಮಹಾನಾದಸ್ವರೂಪವಾಗಿ ಗುರುಲಿಂಗವಿಹುದು.
ಮಣಿಪೂರಕಚಕ್ರದಲ್ಲಿ ಅತಿಮಹಾನಾದಸ್ವರೂಪವಾಗಿ ಶಿವಲಿಂಗವಿಹುದು.
ಅನಾಹತಚಕ್ರದಲ್ಲಿ ಬ್ರಹ್ಮನಾದಸ್ವರೂಪವಾಗಿ ಜಂಗಮಲಿಂಗವಿಹುದು.
ವಿರುದ್ಧಿಚಕ್ರದಲ್ಲಿ ದಿವ್ಯನಾದಸ್ವರೂಪವಾಗಿ ಪ್ರಸಾದಲಿಂಗವಿಹುದು.
ಆಜ್ಞಾಚಕ್ರದಲ್ಲಿ ಪ್ರಾಣನಾದಸ್ವರೂಪವಾಗಿ ಮಹಾಲಿಂಗವಿಹುದು ನೋಡಾ,
ಇದಕ್ಕೆ ಶಿವಲಿಂಗಾಗಮಸೂತ್ರೇ:
ಆಧಾರೇ ಭೃತ್ಯಲಿಂಗಂ ಚ ಸ್ವಾಧಿಷ್ಠೇ ಗುರುಲಿಂಗಕಂ |
ಶಿವಂ ಚ ಮಣಿಪೂರೇ ಚ ಜಂಗಮಂ ಚ ಅನಾಹತೇ ||
ಪ್ರಸಾದಂ ಚ ವಿಶುದ್ಧಿಶ್ಚ ಆಜ್ಞಾಯಾಂ ಮಹಾಲಿಂಗಕಂ |
ಇತಿ ಲಿಂಗಸ್ಥಲಂ ಜ್ಞಾತ್ವಾ ಸುಸೂಕ್ಷ್ಮಂ ಕಮಲಾನನೇ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu ṣaḍvidhaliṅgada nele adentendaḍe:
Ādhāracakradalli nādasvarūpavāgi ācāraliṅgavihudu.
Svādhiṣṭhānacakradalli mahānādasvarūpavāgi guruliṅgavihudu.
Maṇipūrakacakradalli atimahānādasvarūpavāgi śivaliṅgavihudu.
Anāhatacakradalli brahmanādasvarūpavāgi jaṅgamaliṅgavihudu.
Virud'dhicakradalli divyanādasvarūpavāgi prasādaliṅgavihudu.
Ājñācakradalli prāṇanādasvarūpavāgi mahāliṅgavihudu nōḍā,
idakke śivaliṅgāgamasūtrē:
Ādhārē bhr̥tyaliṅgaṁ ca svādhiṣṭhē guruliṅgakaṁ |
śivaṁ ca maṇipūrē ca jaṅgamaṁ ca anāhatē ||
prasādaṁ ca viśud'dhiśca ājñāyāṁ mahāliṅgakaṁ |
iti liṅgasthalaṁ jñātvā susūkṣmaṁ kamalānanē ||''
intendudāgi, apramāṇakūḍalasaṅgamadēvā.