Index   ವಚನ - 463    Search  
 
ಆಧಾರಚಕ್ರದಲ್ಲಿಹ ಆಚಾರಲಿಂಗವು ಸಮಸ್ತವಾದ ತತ್ವಂಗಳ ನಿವಾಸಕ್ಕೋಸುಗ ಆಧಾರವಾದುದಾಗಿ ಕರ್ಮರೂಪವಾದ ಕ್ರಿಯೆಯೆಂಬ ತನ್ನ ಶಕ್ತಿಯಿಂದ ಸರಿಯಿಲ್ಲದುದಾಗಿ ಚಿತ್ತದಿಂದಾಧರಿಸಲು ತಕ್ಕಂಥಾದಾದುದಾಗಿ ಆಶ್ರಯಿಸಲುಪಟ್ಟ ಮೋಕ್ಷಮಾರ್ಗವುಳ್ಳುದುದಾಗಿ ಇದ್ದುದು ಆಚಾರಲಿಂಗ ನೋಡಾ. ಇದಕ್ಕೆ ಮಹಾವಾತುಲಾಗಮೇ: ವಸಂತತಿಲಕವೃತ್ತ- ಕರ್ಮಾತ್ಮನಾ ಸಕಲತತ್ವನಿವಾಸಹೇತೋ ರಾಧಾರಭೂತಮತುಲಂ ಕ್ರಿಯಯಾಸ್ವಶಕ್ತ್ಯಾ | ಚಿತ್ತೇನ ಧಾರ್ಯಮಿತಿ ಪ್ರರೂಪ ನಿವೃತ್ತಿಮಾರ್ಗಂ ಆಚಾರಲಿಂಗಮಿತಿ ವೇದವಿದೋ ವದಂತಿ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.