Index   ವಚನ - 474    Search  
 
ಇನ್ನು ಷಡ್ವಿಧಸಾದಾಖ್ಯದ ನೆಲೆ ಅದೆಂತೆಂದಡೆ: ಆಧಾರಚಕ್ರದಲ್ಲಿ ಕರ್ಮಸಾದಾಖ್ಯವಿಹುದು. ಸ್ವಾಧಿಷ್ಠಾನಚಕ್ರದಲ್ಲಿ ಕರ್ತೃಸಾದಾಖ್ಯವಿಹುದು. ಮಣಿಪೂರಕಚಕ್ರದಲ್ಲಿ ಮೂರ್ತಸಾದಾಖ್ಯವಿಹುದು. ಅನಾಹತಚಕ್ರದಲ್ಲಿ ಅಮೂರ್ತಸಾದಾಖ್ಯವಿಹುದು. ವಿರುದ್ಧಿ ಚಕ್ರದಲ್ಲಿ ಶಿವಸಾದಾಖ್ಯವಿಹುದು. ಆಜ್ಞಾಚಕ್ರದಲ್ಲಿ ಮಹಾಸಾದಾಖ್ಯವಿಹುದು ನೋಡಾ. ಇದಕ್ಕೆ ವಾತುಲಾಗಮತಂತ್ರೇ: ಆಧಾರೇ ಕರ್ಮಸಾದಾಖ್ಯಂ ಸ್ವಾಧಿಷ್ಠಾನೇ ಚ ಕರ್ತೃಕಂ | ಮಣಿಪೂರೇ ಚ ಮೂರ್ತಂ ಚ ಅಮೂರ್ತಂ ಚ ಅನಾಹತೇ || ವಿಶುದ್ಧೌ ಚ ಶಿವಂ ಚೈವ ಆಜ್ಞಾಯಾಂ ಮಹಾಸಾದಾಖ್ಯಂ | ಇತಿ ಷಟ್ಸಾದಾಖ್ಯಂ ಚೈವ ಸ್ಥಾನಸ್ಥಾನೇ ಸಮಾಚರೇತ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.