Index   ವಚನ - 486    Search  
 
ಇನ್ನು ಷಡ್ವಿಧ ಪರಿಣಾಮದ ನೆಲೆ ಅದೆಂತೆಂದಡೆ: ಆಧಾರಚಕ್ರದಲ್ಲಿ ಗಂಧವಿಹುದು. ಸ್ವಾಧಿಷ್ಠಾನಚಕ್ರದಲ್ಲಿ ರಸವಿಹುದು. ಮಣಿಪೂರಕಚಕ್ರದಲ್ಲಿ ರೂಪವಿಹುದು. ಅನಾಹತಚಕ್ರದಲ್ಲಿ ಸ್ಪರ್ಶನವಿಹುದು. ವಿಶುದ್ಧಿಚಕ್ರದಲ್ಲಿ ಶಬ್ದವಿಹುದು. ಆಜ್ಞಾಚಕ್ರದಲ್ಲಿ ಪರಿಣಾಮವಿಹುದು ನೋಡಾ. ಇದಕ್ಕೆ ಮಹಾವಾತುಲತಂತ್ರೇ: ಧಾರೇ ವರ್ತತೇ ಗಂಧೋ ಸ್ವಾಧಿಷ್ಠಾನೇ ರಸಸ್ತಥಾ | ಮಣಿಪೂರೇ ಚ ರೂಪಂ ಚ ಸ್ಪರ್ಶನಂಚನಾಹತೇ | ವಿಶುದ್ಧೌ ಸ್ಥಿಯತೇ ಸಬ್ದಃ ಆಜ್ಞೇಯಂ ತೃಪ್ತಿರೇವಚ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.