Index   ವಚನ - 487    Search  
 
ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ ತಾರಕಸ್ವರೂಪದಲ್ಲಿ- ಉದಾತ್ತ ಋಗ್ವೇದೋ ಭವತಿ ಓಂ ನಕಾರೋ ದೇವತಾ | ತಾರಕೇ ಚ ಲಯಂ ಪ್ರಾಪ್ತೇ ಪ್ರಥಮಂ ಪ್ರಣವಾಂಶಕೇ || ಆ ಪ್ರಣವದ ದಂಡಸ್ವರೂಪದಲ್ಲಿ- ಅನುದಾತ್ತಶ್ಚ ಯಜುರ್ವೇದಃ ಭವತಿ ಓಂ ಮಕಾರೋ ದೇವತಾ | ದಂಡಕೇ ಚ ಲಯಂ ಪ್ರಾಪ್ತೇ ದ್ವಿತೀಯಂ ಪ್ರಣವಾಂಶಕೇ ||'' ಆ ಪ್ರಣವದ ಕುಂಡಲಾಕಾರದಲ್ಲಿ- ಸ್ವರಿತಶ್ಚ ಸಾಮವೇದೋ ಭವತಿ ಓಂ ಶಿಕಾರೋ ದೇವತಾ | ಕುಂಡಲೇ ಚ ಲಯಂ ಪ್ರಾಪ್ತೇ ತೃತೀಯಂ ಪ್ರಣವಾಂಶಕೇ ||'' ಆ ಪ್ರಣವದ ಅರ್ಧಚಂದ್ರಕದಲ್ಲಿ- ಪ್ರಚರಶ್ಚಥರ್ವವೇದೋ ಭವತಿ ಓಂ ವಕಾರೋ ದೇವತಾ | ಅರ್ಧಚಂದ್ರೇ ಚ ಲಯಂ ಪ್ರಾಪ್ತೇ ಚತುರ್ಥಂ ಪ್ರಣವಾಂಶಕೇ ||'' ಆ ಪ್ರಣವದ ದರ್ಪಣಾಕಾರದಲ್ಲಿ- ಗಾಯತ್ರೀಛಂದೋ ಭವತಿ ಓಂ ಯಕಾರೋ ಭವತಿ | ದರ್ಪಣೇ ಚ ಲಯಂ ಪ್ರಾಪ್ತೇ ಪಂಚಮಂ ಪ್ರಣವಾಂಶಕೇ ||'' ಆ ಪ್ರಣವದ ಜ್ಯೋತಿಸ್ವರೂಪದಲ್ಲಿ- ಆತ್ಮಾಚ ಜಪೋ ಭವತಿ ಓಂ ಪ್ರಣವೋ ದೇವತಾ | ಜ್ಯೋತಿರೂಪೇಚ ಲಯಂ ಪ್ರಾಪ್ತೇ ಷಷ್ಠಮಂ ಪ್ರಣವಾಂಶಕೇ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.