Index   ವಚನ - 491    Search  
 
ಆಧಾರಚಕ್ರದಲ್ಲಿ ಅನಾದಿಯೆಂಬ ಸಂಜ್ಞೆ, ಸ್ವಾಧಿಷ್ಠಾನಚಕ್ರದಲ್ಲಿ ಲಿಂಗಕ್ಷೇತ್ರವೆಂಬ ಸಂಜ್ಞೆ, ಮಣಿಪೂರಕಚಕ್ರದಲ್ಲಿ ಶರೀರವೆಂಬ ಸಂಜ್ಞೆ, ಅನಾಹತಚಕ್ರದಲ್ಲಿ ಗೂಢವೆಂಬ ಸಂಜ್ಞೆ, ವಿಶುದ್ಧಿಚಕ್ರದಲ್ಲಿ ಪರವೆಂಬ ಸಂಜ್ಞೆ, ಆಜ್ಞಾಚಕ್ರದಲ್ಲಿ ನಿರಾಕುಳವೆಂಬ ಸಂಜ್ಞೆ ನೋಡಾ. ಇದಕ್ಕೆ ಶಿವಲಿಂಗಸೂತ್ರೇ: ಆಧಾರೇsನಾದಿಸಂಜ್ಞಾ ಚ ಸ್ವಾಧಿಷ್ಠೇ ಲಿಂಗಕ್ಷೇತ್ರಕಂ | ಶರೀರಂ ಮಣಿಪೂರೇ ಚ ಗೂಢಂ ಚಾನಾಹತೇ ತಥಾ || ವಿಶುದ್ಧೌ ಚ ಪರಂ ಚೈವ ಆಜ್ಞಾ ನಿರಾಕುಲಂ ಭವೇತ್ | ಇತಿ ಷಷ್ಠ ಸಂಜ್ಞೇ ಜ್ಞಾತುಂ ದುರ್ಲಭಂ ಕಮಲಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.