Index   ವಚನ - 492    Search  
 
ಗುದಸ್ಥಾನದಲ್ಲಿ ಆಧಾರಚಕ್ರ, ಪೃಥ್ವಿ ಎಂಬ ಮಹಾಭೂತ, ಆ ಚಕ್ರ ಚತುಷ್ಕೋಣಾಕಾರ, ಚತುರ್ದಳಪದ್ಮ. ಆ ಪದ್ಮ ಕೆಂಪುವರ್ಣ, ಅಲ್ಲಿ `ವ ಶ ಷ ಸ' ಎಂಬ ಚತುರಾಕ್ಷರ. ಅಲ್ಲಿ ಪೀತವರ್ಣವಾದ ಸದ್ಯೋಜಾತಮುಖವನುಳ್ಳ ಆಚಾರಲಿಂಗ. ಆ ಲಿಂಗಕ್ಕೆ ನಿವೃತ್ತಿಕಲೆ, ಅಲ್ಲಿ ಕರ್ಮಸಾದಾಖ್ಯ, ಪಶ್ಚಿಮದಿಕ್ಕು. ಅಲ್ಲಿ ಪೆಣ್ದುಂಬಿಯ ನಾದ. ಆ ಲಿಂಗಕ್ಕೆ ಕಾಕಿನಿ ಎಂಬ ಪರಿಯಾಯನಾಮವನುಳ್ಳ ಕ್ರಿಯಾಶಕ್ತಿ ಋಗ್ವೇದವನುಚ್ಚರಿಸುತ್ತ ಸುಚಿತ್ತವೆಂಬ ಹಸ್ತದಿಂದ ಸುಗಂಧವೆಂಬ ದ್ರವ್ಯವನು ಲಿಂಗದ ಘ್ರಾಣವೆಂಬ ಮುಖಕ್ಕೆ ಸದ್ಭಕ್ತಿಯಿಂದರ್ಪಿಸುವಳು. ಬ್ರಹ್ಮ ಪೂಜಾರಿ, ಅನಾದಿಯೆಂಬ ಸಂಜ್ಞೆ. ಇಂತಿವೆಲ್ಲಕ್ಕೂ ಮಾತೃಸ್ಥಾನವಾಗಿಹುದು ನಕಾರವೆಂಬ ಬೀಜಾಕ್ಷರ. ಅದು ಪ್ರಣವದ ತಾರಕಸ್ವರೂಪದಲ್ಲಿಹ ನಕಾರದಲ್ಲಿಹುದಾಗಿ ಆ ಈ ಊ ಏಂ ಓಂ ನಾಂ ಎಂಬ ಬ್ರಹ್ಮನಾದಮಂತ್ರಮೂರ್ತಿಪ್ರಣವದ ಶಿರೋಮಧ್ಯದಲ್ಲಿಹ ಗುಹ್ಯನಾದಮಂತ್ರಮೂರ್ತಿಪ್ರಣವಕ್ಕೆ ನಮಸ್ಕಾರವು ನೋಡಾ. ಇದಕ್ಕೆ ಈಶ್ವರೋsವಾಚ: ಗುದೇಷಾತಸ್ಥಿತಾ ಚಕ್ರಂ ಆಧಾರಂ ಪೃಥ್ವಿರೂಪಕಂ | ಚತುರಾಕೃತಿರಾಕಾರಂ ಚವುದಳಪದ್ಮವೇವಚ || ಅಕ್ಷರಂ ಚ ಚತುರ್ವೆದಂ ಅಧಿದೈವಂ ಪ್ರಜಾಪತಿಃ | ವರ್ಣಂತು ಪೀತವರ್ಣಾನಾಂ ಬೀಜಾಕ್ಷರಂ ನಕಾರಯೇತ್ || ಭ್ರಮರಂ ಸ್ತ್ರೀಸ್ವರಂ ನಾದಂ ಕಾಕಿನೀಶಕ್ತಿಮೇವ ಚ | ಆಚಾರಲಿಂಗಯೋಸ್ಥಿತ್ವಾ ದ್ವಿತೀಚಕ್ರಕ್ರಮಂ ಶ್ರುಣು ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.